ಬೆಂಗಳೂರು,ಮೇ 8- ವೈದ್ಯಕೀಯ ನಿರ್ಲಕ್ಷ್ಯದ ಕಾರಣ ಈಜಿಫ್ಟ್ ಮಹಿಳೆಯ ಜೀವಕ್ಕೆತೊಂದರೆಯಾಗಿದೆ ಎಂದು ಜನಪರ ಸಂಘಟನೆಗಳ ವೇದಿಕೆ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ವಕೀಲ ಅನಂತ್ ನಾಯಕ್ ಮಾತನಾಡಿ, ಈಜಿಪ್ಟ್ ಮೂಲದ ಮಗ್ದ ಹರೌನ್ ಅಲಿ ಎಂಬುವವರು ಜ್ವರದಿಂದ ಬಳಲುತ್ತಿದ್ದು ವೈದ್ಯಕೀಯ ತಪಾಸಣೆಗಾಗಿ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ಬಂದಾಗ ಆಕೆಗೆ ಕ್ಯಾನ್ಸರ್ ಇದೆ ಎಂದು ಸುಳ್ಳು ಹೇಳಿದ್ದಾರೆ. ಇದರಿಂದ ಆಕೆ ಮಾನಸಿಕವಾಗಿ ನೊಂದು ಬೇರೆಡೆ ತಪಾಸಣೆ ಮಾಡಿಸಿದಾಗ ಕ್ಯಾನ್ಸರ್ ಇಲ್ಲದಿರುವುದು ಗೊತ್ತಾಗಿದೆ ಎಂದು ಹೇಳಿದರು.
ನಿರ್ಲಕ್ಷವಹಿಸುವ ಆಸ್ಪತ್ರೆಯಆಡಳಿತ ಮಂಡಳಿ ವಿರುದ್ಧ ಪೊಲಿಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಮಗ್ದ ಹರೌನ್ ಅಲಿ ಅವರ ಜೀವಕ್ಕೆ ಅಪಾಯ ತಂದೊಡ್ಡಿದ ಕಾರಣ ಆಕೆಗೆ 10 ಕೋಟಿ ಪರಿಹಾರ ನೀಡಬೇಕು ಮತ್ತು ಅವರನ್ನು ಈಜಿಪ್ಟ್ಗೆ ಕಳುಹಿಸಿಕೊಡುವ ಕೆಲಸವನ್ನು ಗೃಹ ಇಲಾಖೆ ಮಾಡಬೇಕು ಎಂದು ಅನಂತ್ ನಾಯಕ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮೇರಿ ಇಬ್ರಾಹಿಂ ,ಅಜಿಜ್ , ಪರಮೇಶ್ವರ್ ಉಪಸ್ಥಿತರಿದ್ದರು.