ನವದೆಹಲಿ, ಮೇ 8- ನಾನು ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಪರಿಗಣಿಸುವುದಿಲ್ಲ. ಅವರಿಗೆ ಸರಿಯಾಗಿ ತಿರುಗೇಟು ನೀಡಲಿದ್ದೇನೆ ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ವಿರುದ್ಧ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಗರಂ ಆಗಿದ್ದಾರೆ.
ನೀವು ನಿಮ್ಮ ಇತಿಮಿತಿಯನ್ನು ಮೀರಿ ಮಾತನಾಡುತ್ತಿದ್ದೀರ. ಮುಖ್ಯಮಂತ್ರಿಯಾಗಿರುವ ನಿಮಗೆ ಇಂತಹ ಹೇಳಿಕೆಗಳು ಶೋಭೆ ತರುವುದಿಲ್ಲ ಎಂದು ಟ್ವಿಟ್ಟರ್ನಲ್ಲಿ ಸುಷ್ಮಾ ತಿರುಗೇಟು ನೀಡಿದ್ದಾರೆ.
ನೀವು ಒಂದು ರಾಜ್ಯದ ಮುಖ್ಯಮಂತ್ರಿ. ಆದರೆ, ಮೋದಿ ಇಡೀ ದೇಶಕ್ಕೇ ಪ್ರಧಾನಿ. ಅವರನ್ನು ಗೌರವಿಸುವುದನ್ನು ಕಲಿಯಿರಿ. ಪಶ್ಚಿಮ ಬಂಗಾಳ ಚಂಡಮಾರುತ ಪರಿಹಾರ ಕುರಿತು ಮಾತನಾಡಲು ನಿಮ್ಮೊಂದಿಗೆ ಪ್ರಧಾನಿಯವರು ಬಯಸಿದರೂ ನೀವು ಕನಿಷ್ಠ ಸೌಜನ್ಯ ತೋರದೆ ನಿಮ್ಮ ಇತಿಮಿತಿ ಮೀರಿ ವರ್ತಿಸಿದಿರಿ. ಇದು ಸರಿಯಲ್ಲ. ಯಾವ ವ್ಯಕ್ತಿಯೇ ಇರಲಿ ನಡವಳಿಕೆ ತುಂಬಾ ಮುಖ್ಯ ಎಂದು ಸುಷ್ಮಾ ಟೀಕಿಸಿದ್ದಾರೆ.