ತೆಲಂಗಾಣ,ಮೇ.08-ಚಂಡಮಾರುತದಿಂದ ಓಡಿಶಾದಲ್ಲಿ ವಿದ್ಯುತ್ ಸಂಪರ್ಕದಲ್ಲಿ ಉಂಟಾಗಿರುವ ಅಡಚಣೆಯನ್ನು ಸರಿಪಡಿಸಲು ಮತ್ತು ವಿದ್ಯುತ್ ಪುನಃಸ್ಥಾನೆಗಾಗಿ ತೆಲಂಗಾಣ ಸರ್ಕಾರವು ಬೆಂಬಲವನ್ನು ವಿಸ್ತರಿಸಿದೆ.
ಫಣಿ ಚಂಡಮಾರುತ ಕಾರಣದಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಇಂದು ತೆಲಂಗಾಣದ ವಿವಿಧ ವಿದ್ಯುತ್ ಸಂಸ್ಥೆಗಳಿಂದ ಸುಮಾರು 1000 ನೌಕರರು ಓಡಿಶಾಗೆ ತೆರಳಿದರು. ತೀವ್ರ ಚಂಡಮಾರುತದಿಂದ ಹಲವಾರು ಇದ್ಯುತ್ ಕಂಬಗಳು ಉರುಳಿ ಬಿದ್ದವು ಮತ್ತು ವಿದ್ಯುತ್ ಪ್ರಸರಣ ಮಾರ್ಗಗಳು ಮುರಿದುಬಿದ್ದ ಕಾರಣ ವಿದ್ಯುತ್ ಶಕ್ತಿ ಪೂರೈಕೆಯು ಸ್ಥಗಿತಗೊಂಡಿತು.
ಈ ಕಾರಣದಿಂದ ಓಡಿಶಾ ಸರ್ಕಾರವು ತೆಲಂಗಾಣ ಸರ್ಕಾರವನ್ನು ಓಡಿಶಾದಲ್ಲಿ ವಿದ್ಯುತ್ ಪುನಃಸ್ಥಾಪನೆಗಾಗಿ ಬೆಂಬಲವನ್ನು ನೀಡಲು ವಿನಂತಿಸಿಕೊಂಡಿತ್ತು.
ಈಗ ಕೇರಳದಲ್ಲಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಓಡಿಶಾಗೆ ಬೆಂಬಲ ನೀಡಲು ಮುಖ್ಯ ಕಾರ್ಯದರ್ಶಿ ಎಸ್.ಕೆ.ಜೋಷಿಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ.