ನಾಳೆ ಬೆಂಗಳೂರು ಜಲಮಂಡಳಿಯಿಂದ ನೀರಿನ ಅದಾಲತ್

ಬೆಂಗಳೂರು, ಮೇ 8-ಬೆಂಗಳೂರು ಜಲಮಂಡಲಿಯ ಸಕಾನಿಅ(ಉತ್ತರ-2) ಮತ್ತು ಸಕಾನಿಅ(ಈಶಾನ್ಯ-1) ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ನೀರಿನ ಅದಾಲತ್‍ಅನ್ನು ನಾಳೆ (ಮೇ 9) ಬೆಳಿಗ್ಗೆ 9.30 ರಿಂದ 11ರವರೆಗೆ ನಡೆಸಲಾಗುತ್ತದೆ.

ಸಕಾನಿಅ(ಉತ್ತರ-2) ಉಪವಿಭಾಗ ವ್ಯಾಪ್ತಿಯ ಯಲಹಂಕ ಓಲ್ಡ್ ಟೌನ್, ಯಲಹಂಕ ನ್ಯೂಟೌನ್ ಸೇವಾ ಠಾಣೆ ವ್ಯಾಪ್ತಿಯ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು 1ನೇ ಮಹಡಿ, ಪಿನಾಕಿನಿ ಭವನ, ದೊಡ್ಡಬಳ್ಳಾಪುರ ರಸ್ತೆ, ಯಲಹಂಕ ನ್ಯೂ ಟೌನ್, ಬೆಂಗಳೂರು-64 ಇಲ್ಲಿನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು (ಉತ್ತರ-2) ಉಪವಿಭಾಗ ಕಚೇರಿಯಲ್ಲಿ ಪರಿಶೀಲಿಸಿ ಬಗೆಹರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕಾರ್ಯ ನಿರ್ವಾಹಕ ಅಭಿಯಂತರರು (ಉತ್ತರ): 22945130, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು (ಉತ್ತರ-2) ಉಪವಿಭಾಗ: 28562829 ಸಂಪರ್ಕಿಸಬಹುದು.

ಸಕಾನಿಅ(ಈಶಾನ್ಯ-1) ಉಪವಿಭಾಗ ವ್ಯಾಪ್ತಿಯ ಮಲ್ಲೇಶ್ವರಂ-1 2, ಶ್ರೀರಾಮಪುರ, ಯಶವಂತಪುರ-1 2, ಭಾಷ್ಯಂ ಪಾರ್ಕ್ ಸೇವಾ ಠಾಣೆ ವ್ಯಾಪ್ತಿಯ ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಸಿಸಿಜೆಎಫ್ ಆವರಣ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ ಇಲ್ಲಿನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು (ಈಶಾನ್ಯ-1) ಕಚೇರಿಯಲ್ಲಿ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 22945124ಅಥವಾ 22945131 ಸಂಪರ್ಕಿಸಬಹುದು.

ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಲಿಯ 24/7 ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ:22238888, ಸಹಾಯವಾಣಿ 1916 ಹಾಗೂ ವಾಟ್ಸ್‍ಆಪ್ ಸಂಖ್ಯೆ:8762228888 ಗೆ ಸಂಪರ್ಕಿಸಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ