ಪುತ್ರಿಯ ಪೋಟೊವನ್ನು ರಿವೀಲ್ ಮಾಡಿದ ನಟ ಯಶ್

ಬೆಂಗಳೂರು, ಮೇ 7-ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ತಮ್ಮ ಪುತ್ರಿಯ ಪೋಟೊವನ್ನು ಇಂದು ರಿವೀಲ್ ಮಾಡಿದ್ದಾರೆ.

ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪುತ್ರಿಯ ಪೋಟೋಗಳನ್ನು ಹಂಚಿಕೊಂಡು, ತಮ್ಮ ಅಮೂಲ್ಯವಾದ ಖುಷಿಯನ್ನು ಪರಿಚಯಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಇನ್ನು ಮಗುವಿಗೆ ನಾಮಕರಣ ಮಾಡಿಲ್ಲ. ಹೆಸರು ಇಡುವವರೆಗೂ ಬೇಬಿವೈಆರ್ ಎಂದು ಕರೆಯಿರಿ ಹಾಗೂ ನಮ್ಮ ಮಗುವಿಗೆ ಆಶೀರ್ವಾದವಿರಲಿ ಎಂದು ಪೋಸ್ಟ್ ಮಾಡಿದ್ದಾರೆ.

ನಟ ಯಶ್ ಕೂಡಾ ಇನ್‍ಸ್ಟ್ರಾಗ್ರಾಂ ಹಾಗೂ ಟ್ವೀಟರ್‍ನಲ್ಲಿ ತಮ್ಮ ಪುತ್ರಿಯ ಪೋಟೋ ಹಂಚಿಕೊಂಡಿದ್ದಾರೆ.

ಅಕ್ಷಯ ತೃತೀಯದಂದು ಮಗುವಿನ ಪೋಟೋವನ್ನು ರಿವೀಲ್ ಮಾಡುವುದಾಗಿ ನಿನ್ನೆ ಇನ್‍ಸ್ಟ್ರಾಗ್ರಾಂನಲ್ಲಿ ರಾಧಿಕಾ ಹೇಳಿಕೊಂಡಿದ್ದು, ಅದರಂತೆ ಇದು ಪುತ್ರಿಯ ಪೋಟೋ ರಿವೀಲ್ ಮಾಡಿದ್ದಾರೆ.

ಇಲ್ಲಿಯವರೆಗೂ ಪುತ್ರಿಯ ಪೋಟೋವನ್ನು ಎಲ್ಲಿಯೂ ಕೂಡ ಶೇರ್ ಮಾಡಿಕೊಂಡಿರಲಿಲ್ಲ. ಅಕ್ಷಯ ತೃತೀಯದಂದೇ ಪೋಟೋ ರಿವೀಲ್ ಮಾಡುವುದಾಗಿ ಹೇಳಿಕೊಂಡಿದ್ದ ಸ್ಯಾಂಡಲ್‍ವುಡ್‍ನ ತಾರಾ ಜೋಡಿ ಯಶ್-ರಾಧಿಕಾ ದಂಪತಿ ಅದರಂತೆ ಇಂದು ಮಗಳ ಪೋಟೋವನ್ನು ಬಿಡುಗಡೆ ಮಾಡಿದ್ದಾರೆ.

ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಪೋಟೋ ವೀಕ್ಷಿಸಿ ಫುಲ್ ಖುಷಿಪಟ್ಟು ಆಶೀರ್ವಾದ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ