ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ-ಮಾಜಿ ಸಿ.ಎಂ.ಜದೀಶ್ ಶೆಟ್ಟರ್

ಹುಬ್ಬಳ್ಳಿ, ಮೇ.7- ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದ್ದು, ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ಹೋಮಹವನ, ದೇವಸ್ಥಾನದ ಓಡಾಟ ನಿಲ್ಲಿಸಿ ಜನರ ಸಮಸ್ಯೆಗಳನ್ನು ಆಲಿಸಿ ಬರ ನಿರ್ವಹಣೆಗೆ ಮುಂದಾಗಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಹೋಮ ಮಾಡಿಸುತ್ತಿರುವುದು ಲೋಕ ಕಲ್ಯಾಣಕ್ಕಲ್ಲ, ಕುಟುಂಬದ ಕಲ್ಯಾಣಕ್ಕೆ. ಮಗ ಸೋಲುತ್ತಾನೆ ಎನ್ನುವ ಭಯದಲ್ಲಿ ದೇವರ ಮೊರೆ ಹೋಗಿದ್ದಾರೆ. ಹೋಮ ಮಾಡಿಸುವುದರಿಂದ ಇವಿಎಂ ಮಷಿನ್‍ನಲ್ಲಿನ ಮತಗಳು ಚೇಂಜ್ ಆಗುತ್ತದೆಯೇ ಎಂದು ವ್ಯಂಗ್ಯವಾಡಿದರು.

ಕುಂದಗೋಳ ವಿಧಾನಸಭೆ ಉಪಚುನಾವಣೆಯಲ್ಲಿ ಸತ್ತವರ ಬಗ್ಗೆ ಅನುಕಂಪದ ಮಾತನಾಡಿದ್ದೇವೆ. ಅಷ್ಟಕ್ಕೆ ಶಿವಳ್ಳಿ ಕುಟುಂಬಕ್ಕೆ ಬಿಜೆಪಿ ಬೆಂಬಲಿಸಲಿ ಎಂದು ಡಿ.ಕೆ.ಶಿವಕುಮಾರ ಹೇಳುತ್ತಿದ್ದಾರೆ.ಅವರಿಗೆ ಕಾಮನ್‍ಸೆನ್ಸ್ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ನಾಯಕರು ಲಿಂಗಾಯತರಿಗೆ ಮತಕೊಡಿ ಅಂದಿದ್ದರು.

ಈಗ ಕುಂದಗೋಳ ಕ್ಷೇತ್ರದಲ್ಲಿ ಯಾರಿಗೆ ಮತ ಕೇಳುತ್ತಾರೆ?ಅವರೇ ಹೇಳಲಿ ಎಂದು ಪ್ರಶ್ನೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ