ಒಂದು ಎಡವಟ್ಟು ಪಂದ್ಯದ ಫಲಿತಾಂಶವನ್ನೇ ಬದಲಿಸುತ್ತೆ. ಆ ಒಂದು ಎಡವಟ್ಟು ಟೂರ್ನಿಯಲ್ಲಿ ಒಂದು ತಂಡದ ಕನಸನ್ನೇ ಭಗ್ನಗೊಳಿಸುತ್ತೆ ಅನ್ನೋದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೆಸ್ಟ್ ಎಕ್ಸಾಪಲ್. ಯೆಸ್.. ಆ ಒಂದು ಎಡವಟ್ಟು ರಾಯಲ್ ಚಾಲೆಂಜರ್ಸ್ ಪಾಲಿಗೆ ವಿಲನ್ ಆಗಿ ಕಾಡಿದೆ. ಆರ್ಸಿಬಿ ಅಭಿಮಾನಿಗಳ ಕನಸು ಕಮರುವಂತೆ ಮಾಡಿದ್ದು ನಿಜ. ಅದೇನಾಪ್ಪ ಒಂದು ಎಡವಟ್ಟಿನಿಂದ ಆರ್ಸಿಗೆ ಏನಾಯಿತು ಅಂತಾ ಜಾಸ್ತಿ, ತಲೆ ಕೆಡಿಸ್ಕೋಡಿ.. ಅದೇನು ಅನ್ನೋದನ್ನ ನಾವು ತೋರಿಸ್ತೀವಿ ನೋಡಿ…
ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ ಆ ಒಂದು ನೋ ಬಾಲ್ನಿಂದಾಗಿ ಆರ್ಸಿಬಿ ಪಂದ್ಯ ಕಳೆದುಕೊಳ್ಳುವಂತಾಗಿತ್ತು. ಅಂದು ಮುಂಬೈ ವಿರುದ್ಧ ಆರ್ಸಿಬಿ ಗೆಲುವಿಗೆ ಕೊನೆಯ ಓವರ್ನ ಕೊನೆಯ ಎಸತಕ್ಕೆ 7 ರನ್ಗಳ ಅವಶ್ಯಕತೆಯಿತ್ತು. ಕೊನೆಯ ಎಸೆತವನ್ನು ಲಸಿತ್ ಮಾಲಿಂಗ ನೋ ಬಾಲ್ ಎಸೆದಿದ್ದರು. ಆದರೆ ಅಂಪೈರ್ ನೋ ಬಾಲ್ ನೀಡಲಿಲ್ಲ. ಪರಿಣಾಮ ಫ್ರೀ ಹಿಟ್ ನಿರಾಕರಿಸಲ್ಪಟ್ಟಿತ್ತು. ಅಲ್ಲದೆ ಕೊನೆಯ ಎಸೆತದಲ್ಲೂ ಸಿಂಗಲ್ ಮಾತ್ರ ದಾಖಲಾಗಿದ್ದರಿಂದ ಮುಂಬೈ 6 ರನ್ ಅಂತರದಿಂದ ಪಂದ್ಯವನ್ನು ಗೆದ್ದಿತ್ತು. ಅದೇ ನೋಬಾಲ್ ಎಡವಟ್ಟು ಇಂದು ಮತ್ತೆ ಆರ್ಸಿಬಿ ತಂಡಕ್ಕೆ ವಿಲನ್ ಆಗಿ ಕಾಡುತ್ತಿದೆ.
ಆರ್ಸಿಬಿಗೆ ಪ್ಲೇ-ಆಫ್ ನಿರಾಕರಿಸಿದ್ದು ಅದೇ ನೋ ಬಾಲ್..!
ಯೆಸ್.. ಮುಂಬೈ ವಿರುದ್ಧದ ಪಂದ್ಯದಲ್ಲಿ ಅಂಪೈರ್ ಎಡವಟ್ಟಿಗೆ ಇಂದು ಮತ್ತೆ ಆರ್ಸಿಬಿ ಬೆಲೆ ತೆತ್ತಿದೆ. ಅಂದಿನ ಆ ನೋಬಾಲ್, ಇಂದು ಮತ್ತೆ ಆರ್ಸಿಬಿ ಅಭಿಮಾನಿಗಳ ಎದೆಯಲ್ಲಿ ಬೆಂಕಿ ಹಚ್ಚಿದೆ. ಆ ಒಂದು ನೋಬಾಲ್ನಿಂದಲೇ ಆರ್ಸಿಬಿ ಪ್ಲೇ ಆಫ್ನಿಂದ ಹೊರಬಿದ್ದಿದೆ ಅನ್ನೋದು ಅಭಿಮಾನಿಗಳ ಬೇಸರ. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ತಂಡಗಳು ಕ್ರಮವಾಗಿ 1,2,3ನೇ ಸ್ಥಾನ ಪಡೆದಿವೆ. ಸನ್ ರೈಸರ್ಸ್ ಗೆದ್ದಷ್ಟೇ ಪಂದ್ಯಗಳನ್ನ ಕೆಕೆಆರ್, ಪಂಜಾಬ್ ಗೆದ್ದರು ಅದೃಷ್ಟ ಅನ್ನೋದು ಸನ್ ರೈಸರ್ಸ್ ಕೈ ಇಡಿಯಿತು. ಇಲ್ಲೇ ನೋಡಿ ಅಸಲಿ ಟ್ವಿಸ್ಟ್ ಸಿಗೋದು.. ಹೌದು.. 14 ಪಂದ್ಯಗಳ ಪೈಕಿ 5ರಲ್ಲಿ ಜಯ, 1 ಪಂದ್ಯ ರದ್ದಾದ ಕಾರಣ ಆರ್ಸಿಬಿ 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ..
ಅಂಪೈರ್ ಎಡವಟ್ಟು ಮಾಡದೇ ಇದ್ದಿದ್ರೆ, ಇಂದು ಪ್ಲೇ ಆಫ್ನಲ್ಲಿ ಆರ್ಸಿಬಿ..!
ಯೆಸ್.. ಇಂದು ಆರ್ಸಿಬಿ ಪ್ಲೇ ಆಫ್ನಲ್ಲಿ ಇರದಿರಲು ಮೇನ್ ರೀಸನ್ ಅಂಪೈರ್.. ಅಂದು ಅಂಪೈರ್ ತಮ್ಮ ಕರ್ತವ್ಯ ನಿರ್ವಹಿಸಿದ್ರೆ, ಮುಂಬೈ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆಲುವಿನ ಕೇಕೆ ಹಾಕುತ್ತಿತ್ತು.
ಟೂರ್ನಿಯಲ್ಲಿ ಆರ್ಸಿಬಿ 14 ಪಂದ್ಯಗಳ ಪೈಕಿ 6ರಲ್ಲಿ ಗೆಲುವು ಸಾಧಿಸುವಂತೆ ಆಗುತ್ತಿತ್ತು. ಒಂದು 1 ಫಲಿತಾಂಶವಿಲ್ಲದ ಕಾರಣ ಒಟ್ಟು 13 ಅಂಕಗಳೊಂದಿಗೆ ನಾಲ್ಕನೇ ತಂಡವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ಗೆ ಎಂಟ್ರಿಕೊಡ್ತಿತ್ತು.
ಆದ್ರೆ, ಅಂಪೈರ್ನ ಆ ಯಡವಟ್ಟಿನಿಂದಾಗಿ ಆರ್ಸಿಬಿ ಅಂಕಪಟ್ಟಿಯ ಕೊನ ಸ್ಥಾನದಲ್ಲಿ ಇದೆ. ಅಂದು ಅಂಪೈರ್ ಮಾಡಿದ ಆ ಒಂದು ಯಡವಟ್ಟು ರಾಯಲ್ ಚಾಲೆಂಜರ್ಸ್ ತಂಡದ ಕನಸಿಗೆ ಕೊಳ್ಳಿ ಇಟ್ಟಿದೆ. ಈ ಮೂಲಕ ಕೋಟಿ ಕೋಟಿ ಅಭಿಮಾನಿಗಳ ಹೃದಯ ಭಗ್ನಗೊಳ್ಳುವಂತೆ ಮಾಡಿದೆ. ಅದೇನೇ ಆಗಲಿ ಅಂದು ಆ ಒಂದು ನೋಬಾಲ್ ಪಂದ್ಯದ ಫಲಿತಾಂಶ ಬದಲಿಸುವುದರ ಜೊತೆಗೆ ಪ್ಲೇ ಆಫ್ ಕನಸಿಗೂ ಕೊಳ್ಳಿಇಟ್ಟಿದೆ…