ಮೈಸೂರು,ಮೇ7- ನಗರದಲ್ಲಿನ ಲಿಂಗಾಂಬುದಿ ಕೆರೆಯನ್ನು ದುರಸ್ತಿ ಮಾಡಿ ಅಭಿವೃದ್ದಿಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಜಿ.ಟಿ.ದೇವೇಗೌಡರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಲಿಂಗಾಂಬುದಿ ಕೆರೆ ನೂರಾರು ಜೀವರಾಶಿಗಳ ಆಶ್ರಯ ತಾಣವಾಗಿದೆ. ಸುತ್ತಮುತ್ತಲ ಪ್ರದೇಶಗಳ ನೈಸರ್ಗಿಕ ಸಮತೋಲನ ಕಾಪಾಡುವಲ್ಲಿ ಅಂತರ್ಜಲ ಸುದ್ದಿ ಹೆಚ್ಚಿಸುವಲ್ಲಿ ಲಿಂಗಾಂಬುದಿ ಕೆರೆ ಪಾತ್ರ ಹೆಚ್ಚಾಗಿದೆ.
ಹಾಗಾಗಿ ಈ ಕೆರೆಯನ್ನು ಅಭಿವೃದ್ದಿಪಡಿಸುವಂತೆ ಜಿಟಿಡಿ ಸೂಚಿಸಿದ್ದಾರೆ. ಕೆರೆಯ ನಿರ್ವಹಣೆ ಕೊರತೆಯಿಂದ ಕೆರೆ ಬತ್ತಿ ಹೋಗುತ್ತಿದ್ದು, ವಿನಾಶದ ಅಂಚಿನಲ್ಲಿದೆ.
ಹಾಗಾಗಿ ಈ ಕೆರೆಯಲ್ಲಿರುವ ಹೂಳೆತ್ತಿ ನೀರು ಸಂಗ್ರಹವಾಗುವಂತೆ ಮಾಡಿ ಕೆರೆಯನ್ನು ಅಭಿವೃದ್ಧಿ ಪಡಿಸುವಂತಾಗಬೇಕು ಎಂದರು.
ಮೈಸೂರು ವಿವಿ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಣಯ್ಯ ಅವರು ಮನವಿ ಮಾಡಿದ್ದರು. ಈ ಪತ್ರವನ್ನು ಸಹ ಜಿಲ್ಲಾಧಿಕಾರಿಗಳಿಗೆ ಜಿಟಿಡಿ ನೀಡಿದ್ದು, ಕೆರೆ ಅಭಿವೃದ್ದಿಗೆ ಸೂಚನೆ ನೀಡಿದ್ದಾರೆ.