![konto bengali movie](http://kannada.vartamitra.com/wp-content/uploads/2019/05/konto-bengali-movie-508x381.jpg)
ಬೆಂಗಳೂರು, ಮೇ 6- ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು ಹಾಗೂ ಬದುಕಿನ ಬಗ್ಗೆ ಭರವಸೆ ಮೂಡಿಸುವ ಉದ್ದೇಶದ ಬಹು ನಿರೀಕ್ಷಿತ ಬಂಗಾಳಿ ಚಲನಚಿತ್ರ ಕೊಂತೊದ ವಿಶೇಷ ಪ್ರದರ್ಶನವನ್ನು ನಾರಾಯಣ ಹೆಲ್ತ್ ಸಿಟಿ ಇಂದು ಆಯೋಜಿಸಿತ್ತು.
ವೆಗಾ ಸಿಟಿ ಮಾಲ್ನಲ್ಲಿ ಪ್ರದರ್ಶನವನ್ನು ಆಯೋಜಿಸಿದ್ದು, ನಾರಾಯಣ ಹೆಲ್ತ್ ಸಿಟಿಯ ಅಧ್ಯಕ್ಷ ಮತ್ತು ನಿರ್ದೇಶಕ ಡಾ.ದೇವಿ ಪ್ರಸಾದ್ ಶೆಟ್ಟಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಿತ್ರದ ನಿರ್ಮಾಪಕ, ಮುಖ್ಯ ಪಾತ್ರಧಾರಿ ಶಿಬೊಪ್ರಸಾದ್ ಮುಖರ್ಜಿ, ಪಾಲಿ ಡಾಮ್, ನಿರ್ದೇಶಕರು, ನಿರ್ಮಾಪಕರು ಆದ ನಂದಿತಾ ರಾಯ್ ಅವರು ಹಾಜರಿದ್ದರು.