2019ರ ಐಪಿಎಲ್ ಟೂರ್ನಿಯ ಹೋರಾಟ ಅಂತ್ಯಗೊಳಿಸಿರುವ ಆರ್ಸಿಬಿ, ತನ್ನ ಅಭಿಮಾನಿಗಳಿಗೆ ಧನ್ಯವಾದ ಹೇಳಿದೆ. ಕಳೆದ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಆರ್ಸಿಬಿ ಟೂರ್ನಿಗೆ ವಿದಾಯ ಹೇಳಿತು.
‘ಈ ಸಲ ಕಪ್ ಮಿಸ್ ..ಆದ್ರೆ, ಮುಂದಿನ ಸಲ ಕಪ್ ನಮ್ದೇ’
ಐಪಿಎಲ್ನಲ್ಲೇ ಬೆಸ್ಟ್ ಫ್ಯಾನ್ಸ್ ಎಂದು ಕರೆಸಿಕೊಳ್ಳುವ ಆರ್ಸಿಬಿ ಅಭಿಮಾನಿಗಳು, ಸೋಲು, ಗೆಲುವು ಎರಡರಲ್ಲೂ ಆರ್ಸಿಬಿಯನ್ನ ಕೈ ಬಿಟ್ಟಿಲ್ಲ. ಈ ಸಲ ಕಪ್ ಮಿಸ್ ಆದ್ರೆ, ಮುಂದಿನ ಸಲ ಕಪ್ ನಮ್ದೇ ಎನ್ನುವ ಘೋಷಣೆ ಈಗಿಂದಲೇ ಶುರುವಾಗಿದೆ. ಆರ್ಸಿಬಿ ಅಭಿಮಾನಿಗಳ ಪ್ರೀತಿಗೆ ಫಿದಾ ಆಗಿರುವ ಕ್ಯಾಪ್ಟನ್ ಕೊಹ್ಲಿ ಕರ್ನಾಟಕದ ಜನತೆಗೆ ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಧನ್ಯವಾದ ಹೇಳಿದ್ದಾರೆ. ಜೊತೆಗೆ, ಮುಂದಿನ ವರ್ಷ ಇನ್ನಷ್ಟು ಸ್ಟ್ರಾಂಗ್ ಆಗಿ ಕಣಕ್ಕಿಳಿಯುವುದಾಗಿ ಮಾತು ಕೊಟ್ಟಿದ್ದಾರೆ. ಇಷ್ಟೆಲ್ಲಾ ಇಂಗ್ಲೀಷ್ನಲ್ಲಿ ಹೇಳಿರುವ ಕೊಹ್ಲಿ, ‘ನೀವು ಇಲ್ಲಾಂದ್ರೆ ನಾವು ಏನು ಅಲ್ಲಾ’ ಅಂತಾ ಕೊನೆಯ ಸಾಲನ್ನ ಕನ್ನಡದಲ್ಲೇ ಬರೆಯುವ ಮೂಲಕ ಆರ್ಸಿಬಿ ಅಭಿಮಾನಿಗಳ ಮನ ಗೆದ್ದಿದ್ದಾರೆ.
Thank you guys for all the love & support – the entire team including the fans, the ground staff & the support staff! Promise to come back stronger next year. ನೀವು ಇಲ್ಲಾಂದ್ರೆ ನಾವು ಏನು ಅಲ್ಲಾ ?? @RCBTweets #RCB #RCBBoldArmy #PlayBold pic.twitter.com/Elyhdd9daG
— Virat Kohli (@imVkohli) May 5, 2019