ಬಿಜೆಪಿ ನಾಯಕರು ’ಮೈ ಚೌಕಿದಾರ್’ ಅಲ್ಲ ‘ಮೈ ಪಾಗಲ್’ ಎಂದು ಘೋಷಿಸಿಕೊಳ್ಳುವುದು ಉತ್ತಮ ಎಂದ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ನಾಯಕರು ತಮ್ಮನ್ನು ‘ಮೈ ಚೌಕಿದಾರ್’ ಅಲ್ಲ ‘ಮೈ ಪಾಗಲ್’ ಎಂದು ಘೋಷಿಸಿಕೊಳ್ಳುವುದು ಒಳ್ಳೆಯದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ಜೀವನ ನಂ.1 ಭ್ರಷ್ಟಾಚಾರಿ ಹಣೆಪಟ್ಟಿಯೊಂದಿಗೇ ಕೊನೆಗೊಂಡಿತು ಎಂಬ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿಸುರ ಸಿದ್ದರಾಮಯ್ಯ, ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರು ‘ಮೈ ಚೌಕಿದಾರ್’ ಅಲ್ಲ ‘ಮೈ ಪಾಗಲ್’ ಎಂದು ಘೋಷಿಸಿಕೊಳ್ಳುವುದು ಸೂಕ್ತ ಎಂದಿದ್ದಾರೆ. ಅಲ್ಲದೇ ಹಿರಿಯಣ್ಣನ ಚಾಳಿ ಮನೆ ಮಂದಿಗೆಲ್ಲ’ ಎನ್ನುವಂತೆ ಸೋಲಿನ ಭೀತಿಯಲ್ಲಿರುವ ನರೇಂದ್ರ ಮೋದಿಯವರಿಂದ ಹಿಡಿದು ಈಶ್ವರಪ್ಪನವರವರೆಗೆ ಎಲ್ಲರ ನಾಲಿಗೆಗಳಲ್ಲಿ ಈ ಹತಾಶೆ ಕಾಣಿಸುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ‘ಮೈ ಚೌಕಿದಾರ್’ ಅಲ್ಲ, ‘ಮೈ ಪಾಗಲ್’ ಎಂದು ಬಿಜೆಪಿ ನಾಯಕರೆಲ್ಲ‌ ಘೋಷಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಿದ್ದಾರೆ.

ತಾಯಿಯಂತೆಯೇ ಉಗ್ರರಿಗೆ ಬಲಿಯಾದ ರಾಜೀವ್‌ ಗಾಂಧಿ ಅವರ ಬಗ್ಗೆ ನೀಚತನದ ಮಾತುಗಳನ್ನಾಡುತ್ತಿರುವ ನರೇಂದ್ರ ಮೋದಿಯವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ಚಿಕಿತ್ಸೆಗೆ ಬೇಕಾದ ವಿಶ್ರಾಂತಿಯನ್ನು ದೇಶದ ಮತದಾರರು ಈ ಬಾರಿ ನೀಡುತ್ತಾರೆ. ಅವರು ಈ ಕಾಯಿಲೆಯಿಂದ ಶೀಘ್ರ ಗುಣಮುಖರಾಗಲಿ. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ ಆಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

former cm siddaramaiah, outraged against PM mod,remarks on rajiv gandhi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ