ಗೆಲುವಿನೊಂದಿಗೆ 2019ರ IPl ಟೂರ್ನಿಗೆ ವಿದಾಯ ಹೇಳಿದ RCB

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಹೋರಾಟ ಅಂತ್ಯಗೊಂಡಿದ್ದು, ಗೆಲುವಿನ ಮೂಲಕ ಬೆಂಗಳೂರು ತಂಡ ಅಭಿಮಾನಿಗಳಿಗೆ ವಿದಾಯ ಹೇಳಿದೆ. ನಿನ್ನೆ ತವರಿನ ಅಂಗಳ ಅಂದ್ರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ರೋಚಕ ಪಂದ್ಯದಲ್ಲಿ 4 ವಿಕೆಟ್ಗಳ ಅದ್ಭುತ ಜಯ ದಾಖಲಿಸಿದೆ. ಈ ಮೂಲಕ ಟೂರ್ನಿಯಿಂದ ಹೊರಬೀಳುವ ಮುನ್ನ ತನ್ನ ಅಭಿಮಾನಿಗಳಿಗೆ ಭರ್ಜರಿ ಎಂಟರ್ಟೈನ್ಮೆಂಟ್ ಕೊಟ್ಟಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಕ್ಯಾಪ್ಟನ್ ಕೊಹ್ಲಿ, ಫೀಲ್ಡಿಂಗ್ ಆಯ್ದುಕೊಂಡರು. ಹೈದರಾಬಾದ್ ಪರ ಓಪನರ್ ವೃದ್ಧಿಮಾನ್ ಸಹಾ 20 ರನ್ ಗಳಿಸಿದ್ರೆ, ಮಾರ್ಟಿನ್ ಗಪ್ಟಿಲ್ 30 ರನ್ ಗಳಿಸಿ ಉತ್ತಮ ಆರಂಭ ನೀಡಿದ್ರು. ಬಳಿಕ 3ನೇ ಕ್ರಮಾಂಕದಲ್ಲಿ ಬಂದ ಕನ್ನಡಿಗ ಮನೀಶ್ ಪಾಂಡೆ ಕೇವಲ 9 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡ್ರು. ಮಿಡ್ಲ್ ಆರ್ಡರ್ನಲ್ಲಿ ನಾಯಕ ಕೇನ್ ವಿಲಿಯಮ್ಸ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದ್ರು. ಕೇವಲ 43 ಎಸೆತದಲ್ಲಿ 5 ಬೌಂಡರಿ, 4 ಭರ್ಜರಿ ಸಿಕ್ಸರ್ಗಳ ನೆರವಿನಿಂದ 70 ರನ್ ಬಾರಿಸಿದ್ರು. ಅಂತಿಮವಾಗಿ ಹೈದರಾಬಾದ್ 7 ವಿಕೆಟ್ ನಷ್ಟಕ್ಕೆ 175ರನ್ಗಳ ಉತ್ತಮ ಮೊತ್ತವನ್ನೇ ಕಲೆ ಹಾಕಿತು.

ಇನ್ನು, ಹೈದ್ರಾಬಾದ್ ಗುರಿ ಬೆನ್ನತ್ತಿದ್ದ ಆರ್ಸಿಬಿಗೆ ಆರಂಭಿಕ ಆಘಾತ ಎದುರಾಗಿತ್ತು. ಪಾರ್ಥಿವ್ ಪಟೇಲ್ ಶೂನ್ಯ ಸುತ್ತಿದ್ರೆ, ಕೊಹ್ಲಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ್ರು. ಬಳಿಕ ಎಬಿ ಡಿವಿಲಿಯರ್ಸ್ ಕೂಡ ಔಟಾಗುತ್ತಿದ್ದಂತೆ ಆರ್ಸಿಬಿಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವಂತಾಗಿತ್ತು. ಆದ್ರೆ, ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ವೆಸ್ಟ್ ಇಂಡೀಸ್ನ ಸ್ಫೋಟಕ ಬ್ಯಾಟ್ಸ್ಮನ್ ಶಿಮ್ರಾನ್ ಹೆಟ್ಮಾಯೆರ್ ಹೈದ್ರಾಬಾದ್ ಬೌಲರ್ಗಳ ಬೆವರಿಳಿಸಿದ್ರು. ಅವರ ಜೊತೆಗೆ ಗುರುಕೀರತ್ ಸಿಂಗ್ ಕೂಡ ವಿಲಿಯಮ್ಸನ್ ಪಡೆಯ ಬೆಂಡು ತೆಗೆದ್ರು. ಹೆಟ್ಮಾಯೆರ್ ಕೇವಲ 47 ಎಸೆತದಲ್ಲಿ 75 ರನ್ ಚಚ್ಚಿದ್ರೆ, ಗುರುಕೀರತ್ ಸಿಂಗ್ 48 ಎಸೆತದಲ್ಲಿ 65ರನ್ ಸಿಡಿಸಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ