ಬೆಂಗಳೂರು, ಮೇ 4- ವರ್ಲ್ಡ್ ಲೂಪಸ್ ದಿನಾಚರಣೆ ಅಂಗವಾಗಿ ಡಿವಿಷ ಆರ್ಥರೈಟಿಸ್ ಅಂಡ್ ಮೆಡಿಕಲ್ ಸೆಂಟರ್ ವತಿಯಿಂದ ಲೂಪಸ್ ಮತ್ತು ಆರ್ಥರೈಟಿಸ್ ಕಾಯಿಲೆಗಳ ಉಚಿತ ತಪಾಸಣ ಶಿಬಿರವನ್ನು ಮೇ12 ಬೆಳಿಗ್ಗೆ 9ರಿಂದ ಮಧ್ಯಾಹ್ನ 4 ಗಂಟೆವರೆಗೆ ಬಸವೇಶ್ವರನಗರದಲ್ಲಿರುವ ಸೆಂಟರ್ನಲ್ಲಿ ಆಯೋಜಿಸಲಾಗಿದೆ.
ಡಿವಿಷ ಆರ್ಥರೈಟಿಸ್ ಅಂಡ್ ಮೆಡಿಕಲ್ ಸೆಂಟರ್, 500/ಎ, 1ನೇ ಜಿ ಅಡ್ಡರಸ್ತೆ, 8ನೇ ಮುಖ್ಯರಸ್ತೆ, 4ನೇ ಬ್ಲಾಕ್, 3ನೇ ಹಂತ, ಬಸವೇಶ್ವರ ನಗರ, ಬೆಂಗಳೂರು- 79 ಇಲ್ಲಿ ಏರ್ಪಡಿಸಿದೆ.
15-40 ವರ್ಷ ವಯೋಮಾನದ ಮಹಿಳೆಯರು ಮತ್ತು ಯುವತಿಯರಿಗೆ ಹೆಚ್ಚಾಗಿ ಬರುವ ಲೂಪಸ್ ಕಾಯಿಲೆ ಕಂಡುಬರುತ್ತದೆ. ಇದರ ಲಕ್ಷಣಗಳು ಏನೆಂದರೆ ತೀವ್ರಜ್ವರ, ಊಟ ಸೇರದಿರುವುದು, ತೂಕ ಕಡಿಮೆಯಾಗುವುದು, ನಿಶ್ಶಕ್ತಿ, ಕೂದಲುದುರುವಿಕೆ, ಕಣ್ಣು ಉರಿಯುವುದು, ಸೂರ್ಯನ ಬೆಳಕಿಗೆ ಹೋದಾಗ ಚರ್ಮದ ಮೇಲೆ ದದ್ದರಿಸುವುದು, ಕೀಲುಗಳ ನೋವು, ಎದೆನೋವು, ಕಾಲೂತ ಬರಬಹುದು ಮತ್ತು ಗರ್ಭಿಣಿ ಸ್ತ್ರೀಯರಲ್ಲಿ ಗರ್ಭಪಾತವಾಗುವುದು. ಈ ಕಾಯಿಲೆಯಿಂದ ಗರ್ಭಪಾತ ಪ್ರಮಾಣ ಹೆಚ್ಚಿರುತ್ತದೆ.ಇದನ್ನು ಸರಿಯಾದ ಸಮಯದಲ್ಲಿ ಸೂಕ್ತ ರಕ್ತಪರೀಕ್ಷೆಯಿಂದ ತಿಳಿಯಬಹುದು.
ಈ ಕಾಯಿಲೆಗೆ ರುಮಟಾಲಜಿಸ್ಟ್ ವೈದ್ಯರ ಸಲಹೆ ಮೇರೆಗೆ ಔಷಧಿ ತೆಗೆದುಕೊಂಡು ಸಹಜ ಹಾಗೂ ಸಾಮಾನ್ಯ ಜೀವನ ನಡೆಸಬಹುದಾಗಿದೆ. ಉಚಿತ ತಪಾಸಣೆಗೆ ಹೆಸರು ನೋಂದಾಯಿಸಲು ಮೊ: 9916770444 ಸಂಪರ್ಕಿಸಬಹುದಾಗಿದೆ.