ಒಬ್ಬನ ಕೊಲೆಯಲ್ಲಿ ಅಂತ್ಯವಾದ ಸ್ನೇಹಿತರ ಜಗಳ

ಕೋಲಾರ, ಮೇ 4-ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಎಂ.ಮಲಾಂಡಹಳ್ಳಿಯಲ್ಲಿ ನಡೆದಿದೆ.
ಗೋಪಾಲ(42) ಕೊಲೆಯಾದ ವ್ಯಕ್ತಿ.

ಅಕ್ಕಪಕ್ಕದ ನಿವಾಸಿಗಳಾದ ನಾಗೇಶ್ ಹಾಗೂ ಗೋಪಾಲ್ ಕಳೆದ ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದು ಮಾತನಾಡುತ್ತ ಕುಳಿತಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಜಗಳವಾಡಿದ್ದರು ಎನ್ನಲಾಗಿದೆ. ನಂತರ ಗೋಪಾಲ ನಿದ್ರೆಗೆ ಜಾರಿದ ನಂತರ ನಾಗೇಶ್ ದೊಣ್ಣೆಯಿಂದ ಗೋಪಾಲನ ತಲೆಗೆ ಹೊಡೆದಿದ್ದಾನೆ.

ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಗೋಪಾಲನನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಘಟನೆ ನಂತರ ಆರೋಪಿ ನಾಗೇಶ್ ನಾಪತ್ತೆಯಾಗಿದ್ದು, ವೇಮಗಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ