ಈಗಾಗಲೇ ಪ್ಲೇ ಆಫ್ ರೇಸ್ನಿಂದ ಹೊರ ಬಿದ್ದಿರುವ ಆರ್ಸಿಬಿ, ಇಂದು ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಹೋರಾಡಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಐಪಿಎಲ್ಗೆ ಗೆಲುವಿನ ವಿದಾಯ ಹೇಳಲು ಆರ್ಸಿಬಿ ಕಾತರದಿಂದಿದೆ. ಸನ್ ರೈಸರ್ಸ್ ಹೈದ್ರಾಬಾದ್ಗೆ ಪ್ಲೇ ಆಫ್ ದೃಷ್ಟಿಯಿಂದ ಡು ಆರ್ ಡೈ ಮ್ಯಾಚ್ ಆಗಿದೆ. ಆದ್ರೆ, ಸನ್ ರೈಸರ್ಸ್ ಭವಿಷ್ಯ ಮಾತ್ರ ಇತರೆ ತಂಡಗಳ ಕೈಯಲ್ಲೇ ಇದೆ ಅನ್ನೋದು ಮರೆಯುವಂತಿಲ್ಲ…
ಹೈದ್ರಾಬಾದ್ ವಿರುದ್ಧ ಆರ್ಸಿಬಿಗೆ ಸೇಡಿನ ಪಂದ್ಯ
ಹೌದು. ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧದ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಅನುಭವಿಸಿದ್ದ ಹೀನಾಯ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ಆರ್ಸಿಬಿ ಹೊಂದುಹಾಕಿದೆ. ಈಗಾಗಲೇ ಫ್ಲೇ ಆಫ್ನಿಂದ ಆರ್ಸಿಬಿ ಹೊರಗಿದ್ದರು, ಅಭಿಮಾನಿಗಳ ಎದರಿನ ಪಂದ್ಯ ಆರ್ಸಿಬಿಗೆ ಪ್ರೆಸ್ಟೆಜಸ್ ಮ್ಯಾಚ್ ಆಗಿದೆ. ಆರ್ಸಿಬಿ ಓಪನರ್ ಪಾರ್ಥಿವ್ ಪಟೇಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಅತಿ ನಿರ್ಣಾಯಕವೆನಿಸಲಿದೆ. ಇನ್ನೂ ಹೈದ್ರಾಬಾದ್ ವಿರುದ್ಧ ಸೇಡು ತೀರಿಸಿಕೊಳ್ಳಬೇಕಾದ್ರೆ ಬೌಲರ್ಗಳ ಪಾತ್ರ ಪ್ರಮುಖವಾಗಿದೆ. ಉಮೇಶ್ ಯಾದವ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ನವದೀಪ್ ಸೈನಿ ಉತ್ತಮ ದಾಳಿ ಸಂಘಟಿಸಬೇಕಿದೆ.
ತೂಗೂಯ್ಯಾಲೆಯಲ್ಲಿ ಸನ್ ರೈಸರ್ಸ್ ಪ್ಲೇ ಆಫ್ ಕನಸು
ಮುಂಬೈ ವಿರುದ್ಧ ಗೆಲ್ಲಬೇಕಿದ್ದ ಪಂದ್ಯದಲ್ಲಿ ಶರಣಾಗುವ ಮೂಲಕ ಸನ್ ರೈಸರ್ಸ್, ತನ್ನ ಪ್ಲೇ ಆಫ್ ಹಾದಿಯನ್ನ ತೂಗು ಉಯ್ಯಾಲೆಯಲ್ಲಿ ಇರುವಂತೆ ಮಾಡಿದೆ. ಅಲ್ದೇ ಈ ಐಪಿಎಲ್ನ ಬ್ಯಾಟಿಂಗ್ ಹೀರೋ ಡೇವಿಡ್ ವಾರ್ನರ್ ಹೊರ ಹೋಗಿರುವುದು ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಕನ್ನಡಿಗ ಮನೀಷ್ ಪಾಂಡೆ ಫಾರ್ಮ್ ಮರಳಿರುವುದು ಸಮಾಧಾನದ ಸಂಗತಿ. ಆದ್ರೆ, ತವರಿನ ಅಂಗಳದಲ್ಲಿ ಪಾಂಡೆ ಕ್ರೀಸ್ನಲ್ಲಿದ್ದು ಸ್ಪೋಟಕ ಬ್ಯಾಟಿಂಗ್ ನಡೆಸಬೇಕಾದ ಅನಿವಾರ್ಯತೆ ಹೆಚ್ಚಿದೆ.
ಮಧ್ಯಮ ಕ್ರಮಾಂಕದಲ್ಲಿ ಯಾವೋಬ್ಬ ಬ್ಯಾಟ್ಸ್ಮನ್ನಿಂದ ರನ್ ಬರದಿರುವುದು ತಂಡದ ಆತಂಕ್ಕೆ ಕಾರಣವಾಗಿದೆ.
ಬೌಲಿಂಗ್ನಲ್ಲಿ ಹೈದರಾಬಾದ್ ಬಲಿಷ್ಠ ವಾಗಿದೆ. ರಶೀದ್ ಖಾನ್, ಮೊಹಮ್ಮದ್ ನಬಿ, ಸಂದೀಪ್ ಶರ್ಮ, ಭುವನೇಶ್ವರ್ ಕುಮಾರ್ ಅವರನ್ನೊಳಗೊಂಡ ಬೌಲಿಂಗ್ ಪಡೆ ಕ್ಲಿಕ್ ಆದರೆ ಮೇಲುಗೈ ಸಾಧಿಸುವುದು ಪಕ್ಕ. ಘಾತಕ ಬೌಲಿಂಗ್ ದಾಳಿ ಹೊಂದಿದ್ದರೂ ಡೆತ್ ಓವರ್ನಲ್ಲಿ ಯಶಸ್ಸು ಮರೀಚಿಕೆ ಆಗಿದೆ.
ಒಟ್ನಲ್ಲಿ ಇಂದಿನ ಪಂದ್ಯದಲ್ಲಿ ರಾಜಸ್ಥಾನ, ಹೈದ್ರಾಬಾದ್ ಗೆಲುವು ಸಾಧಿಸಿದ್ರು, ಇವ್ರ ಪ್ಲೇ ಆಫ್ ಕನಸು ಮಾತ್ರ ಇವರ ಕೈಯಲ್ಲಿ ಇಲ್ಲದಿರೋದು ದುರಾದೃಷ್ಟಕರ..