12ನೇ ಆವೃತ್ತಿಯ ಐಪಿಎಲ್ ಟೂರ್ನಿ ಈಗಾಗಲೇ ಪ್ಲೇ ಆಫ್ ಸನಿಹ ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಾಲ್ಕರ ಘಟ್ಟದಲ್ಲಿ ತಮ್ಮ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾಗಿದೆ. ಇನ್ನೇನಿದ್ರೂ ಒಂದು ತಂಡಕ್ಕೆ ಮಾತ್ರ ಪ್ಲೇ ಆಫ್ನಲ್ಲಿ ಚಾನ್ಸ್ ಇದೆ. ಆದ್ರೆ, ಆ ಒಂದು ಸ್ಥಾನಕ್ಕಾಗಿ ನಾಲ್ಕು ತಂಡಗಳು ಬಕ ಪಕ್ಷಿಗಳಂತೆ ಕಾದು ಕುಳಿತಿವೆ. ಹಾಗಾದ್ರೆ ಇರೋ ಆ ಒಂದು ಸ್ಥಾನಕ್ಕೆ ಎಂಟ್ರಿ ಕೊಡೋದು ಮಾತ್ರ ಅಷ್ಟು ಸುಲಭದ ಮಾತಲ್ಲ.. ಅದು ಯಾಕೆ ಅನ್ನೋದನ್ನ ತೋರಿಸ್ತೀವಿ ನೋಡಿ…
ರಾಜಸ್ಥಾನ ರಾಯಲ್ಸ್ಗೆ ಇದೆಯಾ ಪ್ಲೇ ಆಫ್ ಅದೃಷ್ಟ?
ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ಪ್ಲೇ ಆಫ್ ಹಾದಿ ಸುಲಭವಲ್ಲ. ಯಾಕೆಂದ್ರೆ, ರಾಜಸ್ಥಾನ ತಂಡ ಗೆಲ್ಲಬೇಕಾದ್ರೆ, ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಗೆಲುವು ಸಾಧಿಸಬೇಕು. ಜೊತೆಗೆ ಆರ್ಸಿಬಿ ವಿರುದ್ಧ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಸೋಲಬೇಕಿದೆ.
ಇಷ್ಟು ಮಾತ್ರಕ್ಕೆ ರಾಜಸ್ಥಾನ ಪ್ಲೇ ಆಫ್ ಹಾದಿ ಸುಗಮವಾಗಲ್ಲ.. ಹೌದು.. ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ತಂಡಗಳ ಸೋಲು, ಗೆಲುವುಗಳು ಮೇಲೆಯೂ ರಾಜಸ್ಥಾನದ ಭವಿಷ್ಯ ನಿಂತಿದೆ.
ಆ ಮೂರು ತಂಡಗಳ ಸೋಲಿಗೆ ಸನ್ ರೈಸರ್ಸ್ ಜಪ..!
ಸನ್ ರೈಸರ್ಸ್ ಹೈದ್ರಾಬಾದ್ ತಂಡ ತನ್ನ ಗೆಲುವಿನ ಮೂಲಕ ಪ್ಲೇ ಆಫ್ ಪ್ರವೇಶಿಸುವ ಕನಸು ಕಾಣುತ್ತಿದ್ರೆ, ಅದು ತಪ್ಪಾಗುತ್ತೆ. ಹೌದು.. ಸನ್ ರೈಸರ್ಸ್ ಹಾದಿಯೂ ಕಲ್ಲು, ಮುಳ್ಳುಗಳಿಂದ ಕೂಡಿದೆ. ತನ್ನ ಹಾದಿ ಸುಗಮವಾಗಬೇಕೆಂದರೆ. ರಾಜಸ್ಥಾನ ರಾಯಲ್ಸ್ ತಂಡ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸೋಲಬೇಕು.
ಜೊತೆಗೆ ಪಂಜಾಬ್, ಕೆಕೆಆರ್ ತಂಡಗಳ ಸೋಲುಗಳೇ ಸನ್ ರೈಸರ್ಸ್ಗೆ ನಿರ್ಣಾಯಕವಾಗಿದೆ.
ಕೇವಲ ಒಂದು ಪ್ಲೇ ಆಫ್ ಟಿಕೆಟ್ಗಾಗಿ ನಾಲ್ಕು ತಂಡಗಳು ಜಾತಕ ಪಕ್ಷಿಗಳಂತೆ ಕಾದುಕುಳಿತಿದ್ರೆ. ಇತ್ತ ಅಭಿಮಾನಿಗಳು ಮಾತ್ರ ಯಾರು ಪ್ಲೇ ಆಫ್ಗೆ ಎಂಟ್ರಿ ಕೋಡ್ತಾರೆ ಎಂದು ತಲೆಕೆಡಿಸಿಕೊಂಡಿದ್ದಾರೆ..