ಹಮಾಲಿ ಕೊಲೆ ಪ್ರಕರಣ ಖಂಡಿಸಿ ಕಚೇರಿಯ ಪೀಠೋಪಕರಣಗಳ ಧ್ವಂಸಗೊಳಿಸಿದ ಹಮಾಲಿಗಳು

New Delhi: Heap of onion sacks at Azadpur Sabzi Mandi in New Delhi on Monday as the prices of the vegetable continue to soar. PTI Photo by Shahbaz Khan(PTI11_27_2017_000079B)

ದಾವಣಗೆರೆ, ಮೇ 4-ಹಮಾಲಿ ಕೊಲೆ ಪ್ರಕರಣವನ್ನು ಖಂಡಿಸಿ ನಗರದ ಎಪಿಎಂಸಿ ಮಾರುಕಟ್ಟೆಗೆ ನುಗ್ಗಿದ ನೂರಾರು ಹಮಾಲಿಗಳು ಕಚೇರಿಯ ಕಿಟಕಿ ಬಾಗಿಲು ಮತ್ತು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.

ಏ.27 ರಂದು ಹಮಾಲಿ ಬಸಾಪುರ ವಿರೇಶ (35) ಮೃತಪಟ್ಟಿದ್ದ. ಈರುಳ್ಳಿ ದಲ್ಲಾಳಿ ಅಂಗಡಿ ಮಾಲೀಕ ಮೃತ್ಯುಂಜಯ ಜ್ಯೋತಿಬಣ ಎಂಬುವರು ವೀರೇಶನನ್ನು ಕೊಲೆ ಮಾಡಿ ಕಾರಿನಲ್ಲಿ ಹಾಕಿಕೊಂಡು ಬಂದು ಸುಟ್ಟು ಹಾಕಿದ್ದರು ಎಂದು ಮೃತ ವೀರೇಶನ ಪೋಷಕರು, ಸಂಬಂಧಿಗಳು ಹಾಗೂ ಹಮಾಲಿಗಳು ಆರೋಪಿಸಿದ್ದಾರೆ.

ಏ.27 ರಂದು ಹಾವೇರಿ ಜಿಲ್ಲೆ, ರಾಣೆಬೆನ್ನೂರು ತಾಲೂಕಿನ ಹಲಗೇರಿ ಬಳಿ ಕಾರಿನಲ್ಲಿ ವೀರೇಶನ ಸುಟ್ಟ ಶವ ಪತ್ತೆಯಾಗಿತ್ತು.ವೀರೇಶನನ್ನು ಮೃತ್ಯುಂಜಯನೇ ಕೊಲೆ ಮಾಡಿದ್ದಾನೆಂದು ಆಕ್ರೋಶ ವ್ಯಕ್ತಪಡಿಸಿ ಹಮಾಲಿಗಳು ಇಂದು ಎಪಿಎಂಸಿ ಮಾರುಕಟ್ಟೆಯಲ್ಲಿ ದಾಂಧಲೆ ನಡೆಸಿದರು.

ಕೂಡಲೇ ಆತನನ್ನು ಬಂಧಿಸಬೇಕೆಂದು ಪಟ್ಟು ಹಿಡಿದರು. ಹಮಾಲಿಗಳಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತ್ಯುಂಜಯನನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ