ಯುಪಿಎ ಅವಧಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ಸುಳ್ಲು ಎಂದ ಸಚಿವ ವಿ.ಕೆ.ಸಿಂಗ್

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಕೂಡ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದ್ದು, ಪ್ರಮುಖವಾಗಿ 6 ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂದು ಕಾಂಗ್ರೆಸ್ ನಾಯಕರು ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಬಿಜೆಪಿ ಹಲವು ನಾಯಕರು ಇದನ್ನು ಅಲ್ಲಗಳೆದಿದ್ದರು. ಈಗ ಮಾಜಿ ಸೇನಾ ಮುಖ್ಯಸ್ಥ, ಕೇಂದ್ರ ಸಚಿವ ವಿ.ಕೆ.ಸಿಂಗ್​ ಅವರೂ ಕೂಡ ಕಾಂಗ್ರೆಸ್ ಸರ್ಜಿಕಲ್​ ಸ್ಟ್ರೈಕ್​ ನಡೆಸಿದ್ದು ಸುಳ್ಳು ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ಗೆ ಸುಳ್ಳು ಹೇಳುವುದು ಒಂದು ಹವ್ಯಾಸವಾಗಿದೆ ಎಂದು ಟೀಕಿಸಿದ್ದಾರೆ. 2008-2014ರ ವರೆಗಿನ ಕಾಂಗ್ರೆಸ್​ ಆಡಳಿತದ ವೇಳೆ ನಡೆದ ಸರ್ಜಿಕಲ್​ ಸ್ಟ್ರೈಕ್​ಗೆ ಸಾಕ್ಷಿ ಕೊಡಿ ಎಂದು ವಿ.ಕೆ.ಸಿಂಗ್​ ಹೇಳಿದ್ದಾರೆ.

ನೀವು ಸರ್ಜಿಕಲ್​ ಸ್ಟ್ರೈಕ್​ ನಡೆಸಿದ್ದೀರಿ ಎಂದು ಹೇಳಿರುವ ಅವಧಿಯಲ್ಲಿ ನಾನೂ ಸೇನಾ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದೆ. ಆದರೆ, ಈ ಅವಧಿಯಲ್ಲಿ ಯಾವಾಗ ದಾಳಿ ನಡೆಸಿದ್ದೀರಿ ಎಂದು ನನಗೂ ಸ್ವಲ್ಪ ತಿಳಿಸುವಿರಾ? ನನಗೆ ಖಂಡಿತ ಗೊತ್ತು. ಈಗ ಇನ್ನೊಂದು ಹೊಸ ಕಥೆ ಕಟ್ಟಿ ಉತ್ತರಿಸಲು ಯಾರನ್ನಾದರೂ ದುಡ್ಡು ಕೊಟ್ಟು ನೇಮಕ ಮಾಡುತ್ತೀರಿ ಎಂದು ಹೇಳಿದ್ದಾರೆ.

‘Habit of lying…’: Gen VK Singh denies Congress claim of 6 surgical strikes

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ