ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಕೂಡ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದ್ದು, ಪ್ರಮುಖವಾಗಿ 6 ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂದು ಕಾಂಗ್ರೆಸ್ ನಾಯಕರು ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಬಿಜೆಪಿ ಹಲವು ನಾಯಕರು ಇದನ್ನು ಅಲ್ಲಗಳೆದಿದ್ದರು. ಈಗ ಮಾಜಿ ಸೇನಾ ಮುಖ್ಯಸ್ಥ, ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರೂ ಕೂಡ ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ಸುಳ್ಳು ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಸುಳ್ಳು ಹೇಳುವುದು ಒಂದು ಹವ್ಯಾಸವಾಗಿದೆ ಎಂದು ಟೀಕಿಸಿದ್ದಾರೆ. 2008-2014ರ ವರೆಗಿನ ಕಾಂಗ್ರೆಸ್ ಆಡಳಿತದ ವೇಳೆ ನಡೆದ ಸರ್ಜಿಕಲ್ ಸ್ಟ್ರೈಕ್ಗೆ ಸಾಕ್ಷಿ ಕೊಡಿ ಎಂದು ವಿ.ಕೆ.ಸಿಂಗ್ ಹೇಳಿದ್ದಾರೆ.
ನೀವು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೀರಿ ಎಂದು ಹೇಳಿರುವ ಅವಧಿಯಲ್ಲಿ ನಾನೂ ಸೇನಾ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದೆ. ಆದರೆ, ಈ ಅವಧಿಯಲ್ಲಿ ಯಾವಾಗ ದಾಳಿ ನಡೆಸಿದ್ದೀರಿ ಎಂದು ನನಗೂ ಸ್ವಲ್ಪ ತಿಳಿಸುವಿರಾ? ನನಗೆ ಖಂಡಿತ ಗೊತ್ತು. ಈಗ ಇನ್ನೊಂದು ಹೊಸ ಕಥೆ ಕಟ್ಟಿ ಉತ್ತರಿಸಲು ಯಾರನ್ನಾದರೂ ದುಡ್ಡು ಕೊಟ್ಟು ನೇಮಕ ಮಾಡುತ್ತೀರಿ ಎಂದು ಹೇಳಿದ್ದಾರೆ.
‘Habit of lying…’: Gen VK Singh denies Congress claim of 6 surgical strikes