ನವದೆಹಲಿ: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಬಳಿಕ ಭದ್ರತಾ ದೃಷ್ಟಿಯಿಂದ ಬುರ್ಖಾ ನಿಷೇಧ ಮಾಡಿದ ಬೆನ್ನಲ್ಲೇ ಭಾರತದಲ್ಲೂ ಬುರ್ಖಾ ನಿಷೇಧಿಸಬೇಕೆಂಬ ಕೂಗು ಕೇಳಿಬರುತ್ತಿದ್ದು, ಮುಸ್ಲಿಂ ಮಹಿಳೆಯರು ಧರಿಸಿರುವ ಬುರ್ಖಾವನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತರುವುದೇ ಆದರೆ ರಾಜಸ್ಥಾನದ ಹಿಂದು ಮಹಿಳೆಯರು ಧರಿಸುವ ಗುಂಘಟ್ನ್ನು ಕೂಡ ನಿಷೇಧಿಸಬೇಕು ಎಂದು ಬರಹಗಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್ ಒತ್ತಾಯಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರವು ಶ್ರೀಲಂಕಾದಲ್ಲಿ ಬುರ್ಖಾವನ್ನು ನಿಷೇಧಿಸಿರುವಂತೆ ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಭಾರತದಲ್ಲೂ ಈ ಕ್ರಮವನ್ನು ಅನುಸರಿಸಬೇಕು. ರಾವಣನ ಲಂಕೆಯಲ್ಲೇ ಬುರ್ಖಾ ನಿಷೇಧವಾದರೆ, ಶ್ರೀರಾಮನ ಅಯೋಧ್ಯೆಯಲ್ಲಿ ಏಕೆ ಸಾಧ್ಯವಿಲ್ಲ ಎಂದು ಶಿವಸೇನೆ ಪ್ರಶ್ನಿಸಿತ್ತು.
ಇದಕ್ಕೆ ತಿರುಗೇಟು ನೀಡಿರುವ ಜಾವೇದ್ ಅಖ್ತರ್, ನೀವು ಭಾರತದಲ್ಲಿ ಬುರ್ಖಾ ನಿಷೇಧವನ್ನು ಮಾಡಿದರೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ, ರಾಜಸ್ಥಾನದಲ್ಲಿ ನಡೆಯುವ ಕೊನೆ ಹಂತದ ಚುನಾವಣೆಗೂ ಮುನ್ನ ಹಿಂದು ಮಹಿಳೆಯರು ತಮ್ಮ ಮುಖ ಮುಚ್ಚಿಕೊಳ್ಳುವ ಗುಂಘಟ್ ಮೇಲೂ ಸರ್ಕಾರ ನಿಷೇಧ ಹೇರಬಹುದಾ ಎಂದು ಪ್ರಶ್ನಿಸಿದ್ದಾರೆ.
ಗುಂಗಟ್ ಹಾಗೂ ಬುರ್ಖಾ ಎರಡೂ ಹೋದರೆ ನನಗೆ ಖುಷಿಯಾಗುತ್ತದೆ. ನನ್ನ ಕುಟುಂಬದಲ್ಲಿಯೂ ಕೆಲಸ ಮಾಡುವ ಮಹಿಳೆಯರಿರುವುದರಿಂದಾಗಿ ನನಗೆ ಬುರ್ಖಾದ ಬಗ್ಗೆ ಸ್ವಲ್ಪ ಜ್ಞಾನವಿದೆ ಮತ್ತು ನನ್ನ ಮನೆಯಲ್ಲಿ ಎಂದಿಗೂ ನಾನು ಈ ಅಭ್ಯಾಸವನ್ನು ನೋಡಿಲ್ಲ. ಇರಾಕ್ ಅತ್ಯಂತ ಸಂಪ್ರದಾಯಬದ್ಧ ಮುಸ್ಲಿಂ ದೇಶವಾಗಿದೆ. ಆದರೆ, ಮಹಿಳೆಯರು ಅಲ್ಲಿ ತಮ್ಮ ಮುಖಗಳನ್ನು ಮುಚ್ಚುವುದಿಲ್ಲ. ಆದರೆ, ಈಗ ಶ್ರೀಲಂಕಾದಲ್ಲಿ ಕಾನೂನು ಮುಖ ಮುಚ್ಚಿಕೊಳ್ಳುವುದನ್ನು ನಿಷೇಧಿಸುತ್ತದೆ ಎಂದು ಹೇಳಿದ್ದಾರೆ.
Want to ban burqa then outlaw ‘ghunghat’ too, says Javed Akhtar