ಭುವನೇಶ್ವರ: ಒಡಿಶಾದ ಕರಾವಳಿ ಭಾಗಕ್ಕೆ ಫನಿ ಚಂಡಮಾರುತ ಅಪ್ಪಳಿಸಿದ್ದು, ಗಂಟೆಗೆ 185 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಭೀಕರ ಚಂಡಮಾರುತದ ಅಬ್ಬರಕ್ಕೆ ಒಡಿಶಾದ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, , ಜನಜೀವನ ಅಸ್ತವ್ಯಸ್ಥಗೊಂಡಿದೆ.
ಚಂಡಮಾರುತದ ಅಬ್ಬರಕ್ಕೆ ಬಸ್ಸೊಂದು ಉರುಳಿಬಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಮನೆ, ಆಸ್ಪತ್ರೆ,ಕಟ್ಟಡಗಳ ಮೇಲ್ಚಾವಣಿಗಳು ಹಾರಿ ಹೋಗಿವೆ. ಕಟ್ಟಡ ನಿರ್ಮಾಣ ವೇಳೆ ಬಳಸುತ್ತಿದ್ದ ಕ್ರೇನ್ ವೊಂದು ಬಿರುಗಾಳಿ ರಭಸಕ್ಕೆ ಬುಡಮೇಲಾಗಿ ಕುಸಿದು ಬಿದ್ದಿದೆ.
ಇನ್ನು ಕೋಲ್ಕತ್ತಾ ತೀರ ಪ್ರದೇಶಕ್ಕೆ ಫನಿ ಚಂಡಮಾರುತ ಅಪ್ಪಳಿಸಲಿದ್ದು, ಸಮುದ್ರದಲ್ಲಿ ಬೃಹತ್ ಗಾತ್ರದ ಅಲೆಗಳು ಮೇಲೇಳುತ್ತಿವೆ. ಮುಂದಿನ ಮೂರು ಗಂಟೆವರೆಗೆ ಭೂಸಿತದ ಪ್ರಕ್ರಿಯೆ ನಡೆಯುತ್ತದೆ ಎಂದು ಭಾರತೀಯ ಹವಮಾನ ಇಲಾಖೆಯ ಸೈಕ್ಲೊನ್ ಎಚ್ಚರಿಕೆ ವಿಭಾಗದ ಉಸ್ತುವಾರಿ ಮೃತುಂಜಯ್ ಮೊಹಪಾತ್ರ ಅವರು ತಿಳಿಸಿದ್ದಾರೆ. ಪುರಿ, ಬಾಲ್ ಸೋಲ್,ಬಂಜನ್ ಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಆರಂಭವಾಗಿದೆ. ಚಂಡಮಾರುತದ ಅಬ್ಬರಕ್ಕೆ ಹಲವೆಡೆ ವಿದ್ಯುತ್ ಸ್ಥಗಿತಗೊಂಡಿದ್ದು, ವಾಹನ ಸಂಚಾರ ಕೂಡ ಸ್ಥಗತಗೊಂಡಿದೆ.
ಚಂಡಮಾರುತದ ಅಬ್ಬರಕ್ಕೆ 11.5 ಲಕ್ಷಕ್ಕೂ ಹೆಚ್ಚು ಮಂದಿ ಹಾನಿಗೊಳಗಾಗುವ ಸಾಧ್ಯತೆ ಇದ್ದು, ಈಗಾಗಲೇ 13 ಜಿಲ್ಲೆಗಳ ಜನರನ್ನು ಸೈಕ್ಲೊನ್ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತದ ಅಬ್ಬರಕ್ಕೆ ಭಾರಿ ಪ್ರಮಾಣದಲ್ಲಿ ಮರಗಳು ಧರೆಗುರುಳಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಭಾರಿ ಮಳೆಯಾಗುತ್ತಿರುವ ಕಾರಣ ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಕಡಲ ತೀರದಲ್ಲಿ ಅಲೆಯ ಅಬ್ಬರ ಜೋರಾಗಿದ್ದು, ಕಡಲತೀರದ ಜನರನ್ನು ಈಗಾಗಲೇ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ.
ಈಗಾಗಲೇ ಒಡಿಶಾದಲ್ಲಿನ ಭದ್ರಕ್-ವಿಜಯನಗರಂ ವಿಭಾಗದ(ಕೊಲ್ಕತ-ಚೆನ್ನೈ ಮಾರ್ಗ) ರೈಲ್ವೆ ಕಾರ್ಯಾವರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಶನಿವಾರದವರೆಗೂ ರೈಲ್ವೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, 83 ಪ್ಯಾಸೆಂಜರ್ ರೈಲು ಸೇರಿದಂತೆ 140 ರೈಲುಗಳ ಪ್ರಯಾಣವನ್ನು ರದ್ದುಗೊಳಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಮೇ 15ರವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
FANI cyclone, hits odisha:6 death