
ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‍ಇ) ನಡೆಸಿದ 12ನೆ ತರಗತಿ ಪರೀಕ್ಷಾ ಫಲಿತಾಂಶ ಇಂದು ಬೆಳಗ್ಗೆ ಪ್ರಕಟವಾಗಿದೆ.
ಬಾಲಕಿಯರೇ ಈ ಬಾರಿಯೂ ಮೇಲುಗೈ ಸಾಧಿಸಿದ್ದು, ಹನ್ಸಿಕಾ ಸುಕಿಯಾ ಮತ್ತು ಕರೀಷ್ಮಾ ಅರೋರಾ ಅಗ್ರಶ್ರೇಣಿ ಗಳಿಸಿದ್ದಾರೆ.500ಕ್ಕೆ 499 ಅಂಕಗಳನ್ನು ಗಳಿಸಿ ಮಹತ್ವದ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಐಡಿ ಬಳಸಿ ಮಂಡಳಿಯ ವೆಬ್‍ಸೈಟ್‍ನಲ್ಲಿ ಪರೀಕ್ಷಾ ಫಲಿತಾಂಶ ವೀಕ್ಷಿಸಬಹುದು ಎಂದು ಸಿಬಿಎಸ್‍ಇ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ಕೊನೆ ಪರೀಕ್ಷೆ ನಡೆದ ದಿನಾಂಕದಿಂದ 28 ದಿನಗಳೊಳಗೆ ಸಿಬಿಎಸ್‍ಇ 10+2 ತರಗತಿ ಫಲಿತಾಂಶ ಪ್ರಕಟಿಸಿದೆ.
ಸಿಬಿಎಸ್‍ಇ ಈ ಬಾರಿ ಅವಧಿಗೆ ಮುನ್ನವೇ ಅಂದರೆ ಫೆ.16 ರಿಂದ ಪರೀಕ್ಷೆ ನಡೆಸಿತ್ತು.ಪ್ರತಿ ಬಾರಿ ಮೇ 3ನೆ ವಾರದಲ್ಲಿ ಪರೀಕ್ಷಾ ಫಲಿತಾಂಶ ಪ್ರಕಟಗೊಳ್ಳುತ್ತಿತ್ತು.ಆದರೆ, ಈ ಬಾರಿ ಮುನ್ನವೇ ಫಲಿತಾಂಶ ಹೊರಬಿದ್ದಿದೆ.
ದೇಶದ ಎಲ್ಲ ಕೇಂದ್ರಗಳಲ್ಲೂ ಏಕಕಾಲದಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ. 12ನೆ ತರಗತಿಯ ಸಿಬಿಎಸ್‍ಇ ಪಠ್ಯಕ್ರಮದ ಪರೀಕ್ಷೆಗಾಗಿ 13 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.