ಫೇಕ್ ಲೆಟರ್ ವಿಚಾರ-ಪರಸ್ಪರ ಕಾಲೆಳೆದುಕೊಂಡ ನಾಯಕರು

ಬೆಂಗಳೂರು,ಮೇ1- ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತಾದ ಫೇಕ್ ಲೆಟರ್ ವಿಚಾರವಾಗಿ ಟ್ವಿಟರ್‍ನಲ್ಲಿ ಗೃಹ ಸಚಿವ ಎಂ.ಬಿ ಪಾಟೀಲ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಪರಸ್ಪರ ಕಾಲೆಳೆದುಕೊಂಡಿದ್ದಾರೆ.

ಶೋಭಾ ಕರಂದ್ಲಾಜೆ ತಮ್ಮ ಟ್ವಿಟ್ಟರ್ ನಕಲಿ ಪತ್ರ ಆರೋಪದಲ್ಲಿ ಮಾಜಿ ಪತ್ರಕರ್ತ ಹೇಮಂತ್ ಬಂಧನ ಹಿನ್ನೆಲೆ, ಗೃಹ ಸಚಿವರು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದ್ದಾರೆಂದು ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ.

ಅಲ್ಲದೆ ಗೃಹ ಸಚಿವ ಎಂ.ಬಿ ಪಾಟೀಲ್ ವಿರುದ್ಧ ಕೇಂದ್ರ ಗೃಹ ಇಲಾಖೆಗೆ ದೂರು ಕೂಡ ನೀಡಿದ್ದು, ಈ ಸಂಬಂಧ ಟ್ವಿಟರ್‍ನಲ್ಲಿ ಶೋಭಾ ಕರಂದ್ಲಾಜೆಗೆ ಎಂ.ಬಿ.ಪಾಟೀಲ್ ಟಾಂಗ್ ಕೊಟ್ಟಿದ್ದಾರೆ.

ಫೇಕ್ ಪತ್ರ ತನಿಖೆಯ ಬಗ್ಗೆ ಯಾಕೆ ತಲೆಕೆಡಿಸಿಕೊಂಡಿದ್ದೀರಿ. ನಾನು ನನ್ನ ವೈಯಕ್ತಿಕ ವಿಚಾರಕ್ಕಿಂತ ಕಾವೇರಿ ಮಹದಾಯಿ ವಿಚಾರವಾಗಿ ಹೋರಾಟ ನಡೆಸಿದ್ದೇನೆ. ಇಂತಹ ಸಂದರ್ಭದಲ್ಲಿ ನಿಮ್ಮ ಲೆಟರ್ ಪ್ಯಾಡ್ ಎಲ್ಲೋಗಿತ್ತು ಎಂದು ಪ್ರಶ್ನಿಸಿದ್ದಾರೆ.

ಆಲಮಟ್ಟಿ ಸಂತ್ರಸ್ತರ ಪರಿಹಾರಕ್ಕಾಗಿ ಕೇಂದ್ರಕ್ಕೆ ಪತ್ರ ಬರೆದಿಲ್ಲ. ವಿಜಯಪುರಕ್ಕೆ ಏರ್ಪೋರ್ಟ್, ಕರ್ನಾಟಕಕ್ಕೆ ಹೆಚ್ಚಿನ ರೈಲು, ರಾಜ್ಯಕ್ಕೆ ಐಐಎಂ, ಐಐಟಿಎಸ್ ತರೋದಕ್ಕೆ ಕೇಂದ್ರದ ಗಮನಸೆಳೆದಿಲ್ಲ?ಏರ್ ಶೋವನ್ನು ಕರ್ನಾಟಕದಿಂದ ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡುವಾಗಲು ಪತ್ರ ಯಾಕೆ ಬರೆದಿಲ್ಲ? ಎಂದು ಕರಂದ್ಲಾಜೆ ಟ್ವಿಟರ್‍ನಲ್ಲಿ ಪ್ರಶ್ನಿಸುವ ಮೂಲಕ ಎಂ.ಬಿ ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಂ.ಬಿ.ಪಾಟೀಲ್, ಯಾವುದೇ ಮುಖ್ಯಮಂತ್ರಿಗಳು, ಕೇಂದ್ರ ಗೃಹಸಚಿವರು ಅಥವಾ ಪ್ರಧಾನಮಂತ್ರಿಗಳ ಸಹಿ ಹಾಕುವುದನ್ನು ಬಿಜೆಪಿ ಬೆಂಬಲಿಸುವುದು ಅವಹೇಳನಕಾರಿ ಮತ್ತು ಅಪಾಯಕಾರಿ. ಗಂಭೀರ ವಿಷಯದಲ್ಲಿ ತನಿಖೆ ಮಾಡಲು ನಿಮಗೆ ಇಷ್ಟವಿಲ್ಲ. ಒಮ್ಮೆ ನೀವು ನಿಮ್ಮ ಕೈಗಳನ್ನು ಕಟ್ಟಿ ನೋಡಿ, ಇದು ನಮಗೇ ಗಾಬರಿಯಾಗಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ