ಮೇ.1ರಂದು ವರ್ಕರ್ಸ್ ಯೂನಿಯನ್ ವತಿಯಿಂದ ಪ್ರತಿಭಟನೆ

ಬೆಂಗಳೂರು, ಏ.29-ಕರ್ನಾಟಕ ವರ್ಕರ್ಸ್ ಯೂನಿಯನ್ ವತಿಯಿಂದ ಕಾರ್ಮಿಕರ ದಿನಾಚರಣೆ ಅಂಗವಾಗಿ ಬೃಹತ್ ಮೆರವಣಿಗೆಯನ್ನು ಮೇ 1 ರಂದು ಜೆ.ಸಿ.ರಸ್ತೆಯ ಮಿನರ್ವ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯೂನಿಯನ್‍ನ ಪ್ರಧಾನ ಕಾರ್ಯದರ್ಶಿ ಇ.ಕೆ.ಎನ್.ರಾಜನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆರವಣಿಗೆಯಲ್ಲಿ ಕಾರ್ಮಿಕರಿಗೆ ನಿವೃತ್ತಿ ನಂತರ ಭವಿಷ್ಯ ನಿಧಿ ಯೋಜನೆಯಿಂದ ಕನಿಷ್ಠ ಐದು ಸಾವಿರ ರೂ. ನೀಡುವಂತೆ ಕ್ರಮ ವಹಿಸುವುದು, ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಎಲ್ಲಾ ಉದ್ದಿಮೆಗಳ ಕಾರ್ಮಿಕರಿಗೆ 18 ಸಾವಿರ ರೂ ಕನಿಷ್ಠ ವೇತನ ನಿಗದಿಪಡಿಸುವುದು ಹಾಗೂ ಖಾಯಂ ಸ್ವರೂಪದ ಕೆಲಸಗಳಿಗೆ ಗುತ್ತಿಗೆ ಕಾರ್ಮಿಕರನ್ನು ನೇಮಿಸಬಾರದು.

ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದರು.

ಮೆರವಣಿಗೆಯಲ್ಲಿ ಇಂಜಿನಿಯರಿಂಗ್ ಎಲೆಕ್ಟ್ರಾನಿಕ್, ಪ್ಲಾಸ್ಟಿಕ್, ಫಾರ್ಮಾಸಿಟಿಕಲ್ಸ್, ಗಾರ್ಮೆಂಟ್ಸ್, ಪ್ರಿಂಟಿಂಗ್, ಹೋಟೆಲ್, ಆಟೋಮೊಬೈಲ್, ಫೌಂಡ್ರಿ ಇತ್ಯಾದಿ ಉದ್ದಿಮೆಗಳ ಕಾರ್ಮಿಕರು ಭಾಗವಹಿಸಲಿದ್ದು ಮೆರವಣಿಗೆ ಬನ್ನಪ್ಪಪಾರ್ಕ್‍ನಲ್ಲಿ ನಡೆಯುವ ಬಹಿರಂಗ ಸಭೆ ಸೇರಲಿದೆ.

ಸಭೆಯಲ್ಲಿ ನಟ ಚೇತನ್, ಹಿರಿಯ ರಂಗಕರ್ಮಿ ಪ್ರಸನ್ನ ಹಾಗೂ ಹಿರಿಯ ಪತ್ರಕರ್ತ ಎಸ್.ಆರ್.ಆರಾಧ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ