ಮೇ.3ರಂದು ಪೆಪ್ಸಿಕೋ ಕಂಪನಿ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ

ಬೆಂಗಳೂರು, ಏ.29-ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಪೆಪ್ಸಿಕೋ ಇಂಡಿಯಾ ಕಂಪನಿ ವಿರುದ್ಧ ಮೇ 3ರಂದು ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೆಲಮಂಗಲದ ಕಂಪನಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ವಿ.ಆರ್.ನಾರಾಯಣ ರೆಡ್ಡಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತ ದೇಶದ ಬೆನ್ನೆಲುಬಾಗಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹಗಲು ರಾತ್ರಿ ದುಡಿದು ಆಹಾರ ಬೆಳೆಗಳನ್ನು ಬೆಳೆಯುತ್ತಾನೆ. ಆದರೆ, ಆತ ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಇಲ್ಲ.ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಮಧ್ಯವರ್ತಿಗಳು ಹಾಗೂ ಪೆಪ್ಸಿ ಕೋ ನಂತಹ ಬಹುರಾಷ್ಟೀಯ ಕಂಪನಿಗಳು ರೈತನ ಅಸಹಾಯಕತೆಯನ್ನು ಬಂಡವಾಳವನ್ನಾಗಿಸಿಕೊಂಡು ದೌರ್ಜನ್ಯ ಎಸಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೆಪ್ಸಿಕೋ ಕಂಪನಿಯ ಉಪ ಉತ್ಪನ್ನ ವಾದ ಲೇಸï ಚಿಪ್ಸï ತಯಾರಿಕಾ ಘಟಕ ಎಫï 2027 ಹಾಗೂ ಎಫ್‍ಸಿ5 ಎಂಬ ತಳಿಯ ಆಲೂಗಡ್ಡೆ ಪೇಟೆಂಟ್ ತೆಗೆದುಕೊಂಡಿತ್ತು. ಆದರೆ, ಇದರ ಅರಿವಿಲ್ಲದ ಗುಜರಾತಿನ ರೈತರು ಖಾಸಗಿ ಕಂಪನಿ ಬೀಜ ಮಾರಾಟಗಾರರ ಬಳಿ ಇವುಗಳನ್ನು ಖರೀದಿಸಿ ಬೆಳೆದಿದ್ದರಿಂದ ಅಲ್ಲಿನ 9 ರೈತರ ಮೇಲೆ ದೂರು ದಾಖಲಿಸಿ, ತಲಾ 1ಕೋಟಿ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸುವ ಮೂಲಕ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ರೈತರ ಮೇಲಾಗುತ್ತಿರುವ ಇಂತಹ ದೌರ್ಜನ್ಯಗಳು ಮರುಕಳಿಸದಂತೆ ಎಚ್ಚರವಹಿಸಬೇಕೆಂಬ ನಿಟ್ಟಿನಲ್ಲಿ ಮೇ 3ರಂದು 11.30ಕ್ಕೆ ನೆಲಮಂಗಲದ ಪೆಪ್ಸಿಕೋ ಕಂಪನಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ನಾರಾಯಣ ರೆಡ್ಡಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ