ಐಪಿಎಲ್ ಕಲಪರ್ಫುಲ್ ಟೂರ್ನಿಯಲ್ಲಿ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯ ಆರ್‌ಸಿಬಿ ಪಾಲಿಗೆ ಅತಿ ಮುಖ್ಯವೆನಿಸಿದೆ. ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ 8 ಅಂಕ ಮಾತ್ರ ಸಂಪಾದಿಸಿರುವ ಕೊಹ್ಲಿ ಪಡೆ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಪ್ಲೇ ಆಫ್ಗೆ ಪ್ರವೇಶಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂದಿನ ಎಲ್ಲ ಮೂರು ಪಂದ್ಯಗಳು ಡು ಆರ್ ಡೈ ಆಗಿವೆ.. ಹಾಗಾಗಿ ಈ ಪಂದ್ಯವನ್ನು ಗೆಲ್ಲುವುದು ಆರ್‌ಸಿಬಿ ಪಾಲಿಗೆ ದೊಡ್ಡ ಸವಾಲಿನ ವಿಷಯವಾಗಿದೆ. ಇನ್ನೊಂದು ಪಂದ್ಯವನ್ನು ಗೆದ್ದರೆ ಡೆಲ್ಲಿ ಪ್ಲೇ-ಆಫ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಲಿದೆ.
ಡೆಲ್ಲಿ ಹುಡುಗರೆದುರು ಆರ್ಸಿಬಿಗೆ ಸೇಡಿನ ಕದನ
ಹೌದು.. ತವರಿನಲ್ಲಿ ನಡೆದ ಯವ ಡೆಲ್ಲಿ ಹುಡುಗರ ವಿರುದ್ಧ ಸೋತಿದ್ದ ವಿರಾಟ್ ಪಡೆಗೆ ಸೇಡಿನ ಸಮರವಾಗಿದೆ. ಹೀಗಾಗಿಯೇ ಕ್ಯಾಪ್ಟನ್ ಕೊಹ್ಲಿ ತಮ್ಮ ತವರಿನ ಅಂಗಳದಲ್ಲಿ ತಿರುಗೇಟು ನೀಡುವ ತವಕದಲ್ಲಿದ್ದಾರೆ. ವಿಶ್ವಕಪ್ ದೃಷ್ಟಿಯಿಂದ ಇಂಗ್ಲೆಂಡ್‌ಗೆ ಮರಳಿರುವ ಇನ್ ಫಾರ್ಮ್ ಆಲ್‌ರೌಂಡರ್ ಮೊಯಿನ್ ಅಲಿ ಸೇವೆಯಿಂದ ವಂಚಿತವಾಗಿದ್ದು, ಆರ್‌ಸಿಬಿಗೆ ದೊಡ್ಡ ಹೊಡೆತ ನೀಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಫಾರ್ಮ್ ಅತಿ ನಿರ್ಣಾಯಕವೆನಿಸಲಿದೆ. ಇವರಿಗೆ ಬೌಲರ್‌ಗಳು ತಕ್ಕ ಸಾಥ್ ನೀಡಬೇಕಿದೆ. ಇವೆಲ್ಲದಕ್ಕಿಂತಲೂ ಮಿಗಿಲಾಗಿ ಫೀಲ್ಡಿಂಗ್ ಸೇರಿದಂತೆ ಸಾಂಘಿಕ ಹೋರಾಟ ನೀಡುವುದು ಅತಿ ಮುಖ್ಯವಾಗಿದೆ..
ಪ್ಲೇ ಆಫ್ ಸ್ಥಾನ ಭದ್ರಪಡಿಸಿಕೊಳ್ಳಲು ಡೆಲ್ಲಿ ಹೋರಾಟ
ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 7 ಗೆಲುವುಗಳೊಂದಿಗೆ ಒಟ್ಟು 14 ಅಂಕ ಸಂಪಾದಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಇನ್ನೊಂದು ಪಂದ್ಯವನ್ನು ಗೆದ್ದರೆ ಡೆಲ್ಲಿ ಪ್ಲೇ-ಆಫ್ ಪ್ರವೇಶವನ್ನು ಖಚಿತವಾಗಲಿದೆ. ಹೀಗಾಗಿಯೇ ಅತ್ಯುತ್ತಮ ಫಾರ್ಮ್‌ನಲ್ಲಿರುವ ಡೆಲ್ಲಿ, ತವರಿನ ಪರಿಸ್ಥಿತಿಯ ಲಾಭ ಪಡೆಯುವ ತವಕದಲ್ಲಿದೆ. ಶಿಖರ್ ಧವನ್, ಪೃಥ್ವಿ ಶಾ, ರಿಷಭ್ ಪಂತ್, ನಾಯಕ ಶ್ರೇಯಸ್ ಅಯ್ಯರ್ ಬಲ ತಂಡಕ್ಕಿದೆ. ಕಾಲಿಂಗ್ ಇನ್ಗ್ರಾಮ್ ಸಹ ಡೆಲ್ಲಿ ಬ್ಯಾಟಿಂಗ್ ಶಕ್ತಿ ಎನಿಸಿದ್ದಾರೆ. ಬೌಲಿಂಗ್‌ನಲ್ಲಿ ತಂಡಕ್ಕೆ ಇಶಾಂತ್ ಶರ್ಮಾ, ಕಗಿಸೋ ರಬಾಡ, ನೇಪಾಳದ ಸ್ಪಿನ್ನರ್ ಸಂದೀಪ್ ಲಮಿಚ್ಚಾನೆ ಮೇಲೆ ನಿರೀಕ್ಷೆ ಇಡಲಾಗಿದೆ.