ಸೇಪ್ಟಿ ಪಿನ್ ನುಂಗಿದ ಬಾಲಕಿ-ಚಿಕಿತ್ಸೆ ಫಲಿಸದೆ ಬಾಲಕಿಯ ಸಾವು

ಕಲಬುರಗಿ, ಏ.28 – ಊಟ ಮಾಡುವಾಗ ಸೇಫ್ಟಿ ಪಿನ್ ನುಂಗಿದ್ದ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾಳೆ.
ಸೇಡಂ ತಾಲೂಕಿನ ಹಯ್ಯಾಳ ಗ್ರಾಮದ ನಿವಾಸಿ ಸ್ವಪ್ನ (8) ಮೃತಪಟ್ಟ ಬಾಲಕಿ.

ಏಪ್ರಿಲ್ 22 ರಂದು ಮನೆಯಲ್ಲಿ ಊಟ ಮಾಡುವಾಗ ಆಹಾರದಲ್ಲಿ ಪಿನ್ ಬಿದ್ದಿದ್ದು, ನೋಡದೆ ಇದನ್ನು ಸೇವಿಸಿದ್ದಾಳೆ. ಊಟ ಮಾಡಿದ ಕೆಲ ಸಮಯದ ನಂತರ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದು, ಕೂಡಲೇ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಅಲ್ಲಿ ಸ್ಕ್ಯಾನಿಂಗ್ ಮಾಡಿಸಿದ ನಂತರ ಸೇಫ್ಟಿ ಪಿನ್ ನುಂಗಿರುವುದು ತಿಳಿದುಬಂದಿದೆ.

ಅಲ್ಲಿನ ವೈದ್ಯರು ಹೈದರಾಬಾದ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಅದರಂತೆ ಆಕೆಯನ್ನು ಹೈದರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ