ನವದೆಹಲಿ: ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರದಂದು ಐಸಿಸ್ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿ 300ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಘಟನೆ ಬೆನ್ನಲ್ಲೇ ಇದೀಗ ಬೆಂಗಾಲಿ ಭಾಷೆಯಲ್ಲಿ ಇಸಿಸ್ ಉಗ್ರರು ಕಮಿಂಗ್ ಸೂನ್ ಎಂದು ಪೋಸ್ಟ್ ಮಾಡಿದ್ದು ಈಗ ಭಾರತ ಅವರ ಟಾರ್ಗೆಟ್ ಎಂದು ಹೇಳಲಾಗುತ್ತಿದೆ.
ಬೆಂಗಾಲಿಯಲ್ಲಿ ಶಿಗ್ರೋಯ್ ಆಶ್ಚೆ ಎಂದು ಪೋಸ್ಟ್ ಮಾಡಿದ್ದಾರೆ. ಹೀಗಂದರೆ ಬೆಂಗಾಲಿಯಲ್ಲಿ ಶೀಘ್ರದಲ್ಲಿ ಬರಲಿದ್ದೇವೆ ಎಂದು ಅರ್ಥ. ಅದಾಗಲೇ ಐಸಿಸ್ ಬಾಂಗ್ಲಾದೇಶದಲ್ಲಿ ನೆಲೆಯೂರಿದ್ದು ಅಲ್ಲಿನ ಯುವಕರ ಮನಪರಿವರ್ತನೆಯಲ್ಲಿ ತೊಡಗಿದ್ದು ಬಾಂಗ್ಲಾದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದೆ.
ಬಾಂಗ್ಲಾದೇಶ ಪಶ್ಟಿಮ ಬಂಗಾಳಕ್ಕೆ ಹೊಂದಿಕೊಂಡಿರುವುದರಿಂದ ಈ ಗಡಿಯ ಮೂಲಕ ಭಾರತಕ್ಕೆ ಐಸಿಸ್ ಉಗ್ರರು ನುಸುಳಲು ಸಾಧ್ಯತೆಯೂ ಇದೆ ಎನ್ನಲಾಗಿದೆ.
ಸದ್ಯ ಐಸಿಸ್ ನ ಟೆಲಿಗ್ರಾಮ್ ಚಾನೆಲ್ ನಲ್ಲಿ ಪ್ರಸಾರವಾಗಿರುವ ಪೋಸ್ಟ್ ನ ಕುರಿತಾಗಿ ತನಿಖೆ ಆರಂಭವಾಗಿದ್ದು ಈ ಪೋಸ್ಟರ್ ನಲ್ಲಿ ಅಲ್-ಮುರ್ಸಾಲತ್ ಎನ್ನುವ ಲೋಗೋ ಸಹ ಇದೆ. ಸದ್ಯ ವೈರಲ್ ಆಗಿರುವ ಪೋಸ್ಟರ್ ಅನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
Coming soon: IS poster in Bengali hints at attack days after Sri Lanka serial blasts