ರಿಯಾನ್ ಪರಾಗ್ ಐಪಿಎಲ್ನಲ್ಲಿ ಸಿಕ್ಕ Sensational ಕ್ರಿಕೆಟರ್. ಕಲರ್ಫುಲ್ ಟೂರ್ನಿ ಮೂಲಕ ಬೆಳಕಿಗೆ ಬಂದಿರುವ ಈ ಟ್ಯಾಲೆಂಟ್ ಚೊಚ್ಚಲ ಐಪಿಎಲ್ನಲ್ಲೆ ಕಮಾಲ್ ಮಾಡಿದ್ದಾರೆ.
ಅಸ್ಸಾಂ ಕ್ರಿಕೆಟಿಗನಾಗಿರುವ ರಿಯಾನ್ ಪರಾಗ್ಗೆ ಜಸ್ಟ್ 17 ವರ್ಷ. ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ನಿರ್ಭಿತಿಯಿಂದ ಆಡುತ್ತಿರುವ ಈ ಟೀನೇಜ್ ಕ್ರಿಕೆಟಿಗನ ಆಟಕ್ಕೆ ಕ್ರಿಕೆಟ್ ದಿಗ್ಗಜರು ಕೂಡ ಫಿದಾ ಆಗಿದ್ದಾರೆ. ಡೆಬ್ಯು ಐಪಿಎಲ್ನಲ್ಲಿ ಅಬ್ಬರಿಸಿರುವ ಪರಾಗ್ ಪರಾಕ್ರಮ ಮೆರೆದಿದ್ದಾರೆ. ಆಡಿದ ನಾಲ್ಕೆ ಪಂದ್ಯಗಳಲ್ಲಿ ತಮ್ಮ ಟ್ಯಾಲೆಂಟ್ ಪ್ರೂವ್ ಮಾಡಿ ಭವಿಷ್ಯದ ಟೀಂ ಇಂಡಿಯಾದ ಫ್ಯೂಚರ್ ಪ್ಲೇಯರ್ ಅಂತ ಬ್ಯಾಟ್ ಮೂಲಕ ಹೇಳುತ್ತಿದ್ದಾರೆ.
ಮೊನ್ನೆ ಈಡನ್ ಗಾರ್ಡನ್ ಅಂಗಳದಲ್ಲಿ ಕೋಲ್ಕತ್ತಾ ವಿರುದ್ಧ ನಡೆದ ಪಂದ್ಯದಲ್ಲಿ ಡೆಡ್ಲಿ ಬ್ಯಾಟಿಂಗ್ ಮಾಡಿ ತಂಡದ ಗೆಲುವಿನ್ಲಿ ಪ್ರಮುಖ ಪಾತ್ರವಹಿಸಿದ್ರು.
ಒಂದು ಹಂತದಲ್ಲಿ 78 ರನ್ಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ರಾಜಸ್ತಾನ ತಂಡಕ್ಕೆ ಪರಾಗ್ ಆಪಾದ್ಬಾಂಧವನಾಗಿ ತಂಡವನ್ನ ಕಾಪಾಡಿದ್ರು.
ಐದನೇ ಕ್ರಮಾಂಕದಲ್ಲಿ ಬಂದ ಪರಾಗ್ ಏಕಾಂಗಿ ಹೋರಾಟ ಮಾಡಿ ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್ಸ್ಗಳನ್ನ ಮನಬಂದಂತೆ ಚೆಂಡಾಡಿದ್ರು. ಯಾರು ನಿರೀಕ್ಷಿಸದ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ ಈ ಅಸ್ಸಾಮಿ ಕ್ರಿಕೆಟರ್ ತಂಡವನ್ನ ಗೆಲುವಿನ ಹೊಸ್ತಿಲಿಗೆ ಕೊಂಡೊಯ್ದರು.
ರಿಯಾನ್ ಪರಾಗ್ 31 ಎಸೆತ ಎದುರಿಸಿ ಒಟ್ಟು 47 ರನ್ ಕಲೆ ಹಾಕಿದ್ರು. ಇದರಲ್ಲಿ 5 ಬೌಂಡರಿ 2 ಸಿಕ್ಸರ್ ಬಾರಿಸಿ 151.61 ಸ್ಟ್ರೈಕ್ ರೇಟ್ ಪಡೆದ್ರು.
ಪರಾಗ್ ಪರಾಕ್ರಮಕ್ಕೆ ಸ್ಮಿತ್ ಫಿದಾ
ರಿಯಾನ್ ಪರಾಗ್ ಪರಾಕ್ರಮಕ್ಕೆ ಆಟಕ್ಕೆ ಸ್ವತಃ ತಂಡದ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಕೂಡ ಫಿದಾ ಆಗಿದ್ದಾರೆ. Seasoned Campaighnerನಂತೆ ಆಡುತ್ತಿದ್ದಾರೆ ಅಂತಾ ಹಾಡಿ ಹೊಗಳಿದ್ದಾರೆ.
ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಬಾರಿಸಿದ ಪರಾಗ್
ಪರಾಗ್ ಮೊನ್ನೆ ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಚಾಂಪಿಯನ್ ಪ್ಲೇಯರ್ ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಬಾರಿಸಿ ಅಚ್ಚರಿ ಮೂಡಿಸಿದ್ದಾರೆ.
ಇದರೊಂದಿಗೆ ಬ್ಯಾಟಿಂಗ್ನಲ್ಲಿ ಮೊತ್ತೊಂದು ಟ್ಯಾಲೆಂಟ್ನ್ನ ತೋರಿಸಿದ್ದಾರೆ.
ಹಿಟ್ವಿಕೆಟ್ ಕ್ಲಬ್ ಸೇರಿದ ಪರಾಗ್
ಡೆಬ್ಯೂ ಪಂದ್ಯದಲ್ಲೆ ಇಂಪ್ರೆಸ್ ಮಾಡಿರುವ ಪರಾಗ್ ತಮಗೆ ಬೇಡವಾದ ದಾಖಲೆಯೊಂದನ್ನ ಬರೆದಿದ್ದಾರೆ. ಮೊನ್ನೆ ಆ್ಯಂಡ್ರೆ ರಸ್ಸೆಲ್ ಓವರ್ನಲ್ಲಿ ಹಿಟ್ ವಿಕೆಟ್ ಆಗುವ ಮೂಲಕ ಐಪಿಎಲ್ನಲ್ಲಿ ಹಿಟ್ವಿಕೆಟ್ ಆದ 10 ನೇ ಬ್ಯಾಟ್ಸ್ಮನ್ ಅಂಥ ಹಣೆಪಟ್ಟಿ ಹೊತ್ತಿದ್ದಾರೆ.
ಒಟ್ಟನಲ್ಲಿ ಐಪಿಎಲ್ ಮೂಲಕ ಟೀಂ ಇಂಡಿಯಾಕ್ಕೆ ಮತ್ತೋಬ್ಬ ಪ್ರತಿಭಾನ್ವಿತಾ ಅಲ್ರೌಂಡರ್ ಸಿಕ್ಕಿದ್ದು ಪರಾಗ್ ಟೀಂ ಇಂಡಿಯಾ ಬಾಗಿಲು ಬಡಿಯೋದ್ರಲ್ಲಿ ಅನುಮಾನವೇ ಇಲ್ಲ