ಬೆಂಗಳೂರು: ಎಂದಿನಂತೆಯೇ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ತುಸು ಏರಿಕೆಯಾಗಿದ್ದು, ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ಗೆ ₹ 75.33 ಇದೆ.
ಡೀಸೆಲ್ ದರ 68.77 ರೂ. ಆಗಿದೆ. ಅಲ್ಲದೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 72.95 ರೂ. ಮತ್ತು ಡೀಸೆಲ್ ದರ 66.61 ರೂ. ಆಗಿದೆ.
ಹಾಗೆಯೇ ಚೆನ್ನೈನಲ್ಲಿ ಪೆಟ್ರೋಲ್ ದರ 75.71 ರೂ. ಮತ್ತು ಡೀಸೆಲ್ ದರ 70.34 ರೂ, ಕೋಲ್ಕತಾದಲ್ಲಿ ಪೆಟ್ರೋಲ್ ದರ74.97 ರೂ. ಮತ್ತು ಡೀಸೆಲ್ ದರ 68.35 ರೂ, ಮುಂಬೈನಲ್ಲಿ ಪೆಟ್ರೋಲ್ ದರ78.52 ರೂ. ಮತ್ತು ಡೀಸೆಲ್ ದರ 69.72 ರೂ. ಇದೆ ಎಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಿಲ್ಲದ ಕಾರಣ ಕೊಂಚ ನಿರಾಳವಾಗಿದ್ದ ವಾಹನ ಸವಾರರಿಗೆ ಕಹಿಸುದ್ದಿ ಸಿಕ್ಕಿತ್ತು.
ಮೂರು ತಿಂಗಳ ಮುನ್ನ ಬೆಲೆ ಏರಿಕೆಗೆ ತತ್ತರಿಸಿ ಹೋಗಿದ್ದ ವಾಹನ ಸವಾರರಿಗೆ ಮತ್ತೆ ಸಂಕಷ್ಟ ಎದುರಾಗಲಿದೆ ಎನ್ನಲಾಗಿತ್ತು. ಮುಂದಿನ ದಿನಗಳಲ್ಲಿ ಇಂಧನ ದರದಲ್ಲಿ ಭಾರೀ ಏರಿಕೆಯಾಗಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಲೀಟರ್ಗೆ 5 ರೂ.ನಿಂದ 10 ರೂ. ಏರಿಕೆಯಾಗಬಹುದು ಎಂದು ಹೇಳಲಾಗುತ್ತಿತ್ತು.
ಇರಾನ್ನಿಂದ ತೈಲ ಆಮದು ಮಾಡಿಕೊಳ್ಳಲು ಅಮೆರಿಕ ನೀಡಿದ್ದ ವಿನಾಯಿತಿ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಕಾರಣವಾಗಿದೆ. ಈ ಆಮದು ಮೇಲಿನ ನಿರ್ಬಂಧ ಹೇರಿದ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 5 ರಿಂದ 10 ರೂ.ವರೆಗೆ ಏರಿಕೆಯಾಗಲಿದೆ ಎನ್ನುತ್ತಿದ್ದವು ಮೂಲಗಳು ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್ಗೆ ರೂ. 4636 ಕ್ಕೆ ತಲುಪಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಕಾಣಬಹುದಾಗಿದೆ.