ವಾಷಿಂಗ್ಟನ್: ಮೈಕ್ರೋಸಾಫ್ಟ್ ವಹಿವಾಟು ಒಂದು ಶತಕೋಟಿ ಡಾಲರ್ ದಾಟುವ ಮೂಲಕ ಜಾಗತಿಕ ದಿಗ್ಗಜ ಕಂಪನಿಗಳಾದ ಆ್ಯಪಲ್, ಅಮೆಜಾನ್ ಸಾಲಿಗೆ ಸೇರಿದೆ. ಟೆಕ್ ಧೈತ್ಯ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೇಲ್ಲಾ ಅವರ ನಾಯಕತ್ವದಲ್ಲಿ ಕಳೆದ ವಿತ್ತೀಯ ಮುಕ್ಕಾಲು ವರ್ಷದಲ್ಲಿ ಉತ್ತಮ ಸಾಧನೆ ತೋರಿದೆ.
ಈ ಮೂಲಕ ಶತಕೋಟಿ ಡಾಲರ್ ಕ್ಲಬ್ ಸೇರಿದ 3ನೇ ಕಂಪನಿ ಎಂಬ ಶ್ಲಾಘನೆಗೆ ಗುರಿಯಾಗಿದೆ. ಭಾರತೀಯ ಮೂಲಕ ಸತ್ಯ ನಾದೆಲ್ಲಾ ಅವರ ಕಾರ್ಯವೈಖರಿಗೆ ಎಲ್ಲರೂ ತಲೆದೂಗುತ್ತಿದ್ದಾರೆ.
ಶತಕೋಟಿ ಕ್ಲಬ್ ಸೇರಿದ ಮೂರು ಕಂಪನಿಗಳು ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು ಎಂಬುದು ವಿಶೇಷ. ಶತಕೋಟಿ ಡಾಲರ್ ಕ್ಲಬ್ ಸೇರಿದ ಮೊದಲ ಕಂಪನಿ ಆ್ಯಪಲ್.
ಕೆಲವೇ ತಿಂಗಳುಗಳಲ್ಲಿ ಅಮೆಜಾನ್ ಈ ಸಾಧನೆ ಮಾಡಿತು.
ನೂತನ ಸಾಧನೆ ಮಾಡಿದಾಗ ಅದರ ಸಂಭ್ರಮದಲ್ಲಿ ಕಳೆದು ಹೋಗುವುದಿಲ್ಲ. ಎಲ್ಲರೂ ಇದೊಂದು ಬದಲಾವಣೆ ಎಂದು ತಿಳಿದುಕೊಂಡು ಕೆಲಸದಲ್ಲಿ ಮಗ್ನರಾಗುತ್ತಾರೆ. ಇದರಿಂದ ಹೊಸ ಹೊಸ ಮೈಲಿಗಲ್ಲುಗಳನ್ನು ತಲುಪಲು ಸಾಧ್ಯವಾಗುತ್ತಿದೆ ಎಂದು ಮೈಕ್ರೋಸಾಫ್ಟ್ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಕ್ರಿಸ್ ಕ್ಯಾಪೊಸೆಲ್ಲಾ ತಿಳಿಸಿದ್ದಾರೆ.