ಇಂದು ಹೈದ್ರಾಬಾದ್-ರಾಜಸ್ಥಾನ್ ನಡುವೆ ಬಿಗ್ ಫೈಟ್: ತವರಿನ ಕೊನೆ ಪಂದ್ಯ ಗೆಲ್ಲಲು ರಾಯಲ್ಸ್ ಗೇಮ್ ಪ್ಲಾನ್

ಐಪಿಎಲ್ನಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ತಂಡ ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ಎದುರಿಸಲಿದೆ. ಸವಾಯ್ಮಾನ್ ಸಿಂಗ್ ಅಂಗಳದಲ್ಲಿನ ಇಂದಿನ ಪಂದ್ಯ ರಾಜಸ್ಥಾನ್ ರಾಯಲ್ಸ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಸನ್ ರೈಸರ್ಸ್ ವಿರುದ್ಧ ಜಯಗಳಿಸಿ ಪ್ಲೇ ಆಫ್ ಆಸೆ ಜೀವಂತವರಿಸಲು ಕಾತರಿಸುತ್ತದೆ. ಮೊನ್ನೆಯಷ್ಟೆ ಕೋಲ್ಕತ್ತಾ ಬಗ್ಗು ಬಡಿದಿದ್ದ ಸ್ಮಿತ್ ಹುಡುಗರು ಮತ್ತೊಂದು ಗೆಲುವಿನ ಕನಸಿನಲ್ಲಿದೆ. ಪ್ಲೇ ಆಫ್ ದೃಷ್ಟಿಯಿಂದ ಸನ್ ರೈಸರ್ಸ್ ಹೈದ್ರಾಬಾದ್ಗೂ ಈ ಪಂದ್ಯ ಮಹತ್ವದ್ದಾಗಿದೆ. ಹೀಗಾಗಿಯೇ ಚೆನ್ನೈ ವಿರುದ್ಧದ ಸೋಲಿನ ಕಹಿ ಮರೆತು ಆತ್ಮವಿಶ್ವಾಸದಿಂದ ಹೈದ್ರಾಬಾದ್ ಕಣಕ್ಕಿಳಿಯುತ್ತಿದೆ.

ಹೈದ್ರಾಬಾದ್ ವಿರುದ್ಧ ಆರ್ಆರ್ಗೆ ಸೇಡಿನ ಸಮರ
ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ ಸೋತಿದ್ದ ರಾಜಸ್ಥಾನ್ ರಾಯಲ್ಸ್, ತವರಿನ ಅಂಗಳದಲ್ಲಿ ಸೇಡು ತೀರಿಸಿಕೊಳ್ಳಲು ಖೆಡ್ಡಾ ತೋಡಿದೆ. ಹಿಂದಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆದ್ದಿರುವ ರಾಜಸ್ಥಾನ್ ರಾಯಲ್ಸ್, ತವರಿನ ಅಂಗಳದಲ್ಲಿನ ಕೊನೆ ಪಂದ್ಯ ಗೆಲ್ಲುವ ಮೂಲಕ ತವರಿನ ಅಭಿಯಾನ ಮುಕ್ತಾಯಗೊಳಿಸೋ ಕನಸಿನಲ್ಲಿದೆ. ಸಂಜು ಸ್ಯಾಮ್ಸನ್, ರಹಾನೆ ಉತ್ತಮ ಫಾರ್ಮ್ನಲ್ಲಿದ್ದಾರೆ. ನಾಯಕ ಸ್ಟೀವನ್ ಸ್ಮಿತ್, ರಿಯಾನ್ ಪರಾಗ್, ಬಿನ್ನಿ ಸ್ಲಾಗ್ ಓವರ್ಗಳಲ್ಲಿ ರನ್ ಹೊಳೆ ಹರಿಸಬೇಕಿದೆ. ಆಲ್ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಜೋಫ್ರಾ ಆರ್ಚರ್ ವಿಶ್ವಕಪ್ ದೃಷ್ಟಿಯಿಂದ ತವರಿಗೆ ಮರಳಿದ್ದಾರೆ. ಇದು ರಾಯಲ್ಸ್ಗೆ ಹಿನ್ನಡೆಯಾಗಿದೆ.

ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್ನಲ್ಲಿ ಮಿಂಚಿ ತಂಡವನ್ನು ಜಯದ ದಡ ಸೇರಿಸಿದ್ದ ಶ್ರೇಯಸ್, ಜೋಫ್ರಾ ಆರ್ಚರ್ ಇಂದು ಅಂಥದ್ದೇ ಪ್ರದರ್ಶನ ನೀಡಿಬೇಕಿದೆ. ಕೆಕೆಆರ್ ಬ್ಯಾಟ್ಸ್ಮನ್ಗಳ ನಿದ್ದೆ ಗೆಡಿಸಿದ್ದ ವರುಣ್ ಆರೋನ್ ಮತ್ತೆ ಮಿಂಚುವ ತವಕದಲ್ಲಿದ್ದಾರೆ. ಹಿಂದಿನ ಪಂದ್ಯದಲ್ಲಿ ದುಬಾರಿ ಬೌಲರ್ ಆಗಿದ್ದ ಜಯದೇವ್ ಉನಾದ್ಕಟ್ ಮತ್ತೆ ಸೂಪರ್ ಸ್ಪೆಲ್ ಮಾಡಬೇಕಿದೆ.

ಸನ್ ರೈಸರ್ಸ್ಗೆ ಕಾಡಲಿದೆ ವಾರ್ನರ್, ಸ್ಟೋಕ್ಸ್ ಅನುಪಸ್ಥಿತಿ
ಡೇವಿಡ್‌ ವಾರ್ನರ್‌ ಹಾಗೂ ಜಾನಿ ಬೈರ್‌ ಸ್ಟೋ ನಿರ್ಗಮನದಿಂದ ಸನ್‌ ರೈಸರ್ಸ್‌ ಹೈದರಾಬಾದ್ಗೆ ಭಾರಿ ಹಿನ್ನಡೆಯಾಗಿದೆ. ಈ ಜೋಡಿ ಇಲ್ಲಿಯವರೆಗೂ ಮೊದಲ ವಿಕೆಟ್‌ ಗೆ 733 ರನ್‌ ಜತೆಯಾಟವಾಡಿದ್ದಾರೆ. ತಂಡದ ಅಧಾರ ಸ್ಥಂಭಗಳಾಗಿದ್ದ ವಾರ್ನರ್, ಬೇರ್ ಸ್ಟೋ ಅನುಪಸ್ಥಿತಿಯಿಂದ ಸನ್ ರೈಸರ್ಸ್ ಮುಂದಿನ ಹಾದಿ ಕಷ್ಟಕರವಾಗಲಿದೆ. ಅಲ್ದೇ ಇವರಿಬ್ಬರ ಸ್ಥಾನ ತುಂಬುವವರು ಯಾರು ಎಂಬ ಪ್ರಶ್ನೆ ಉದ್ಬವಿಸಿದೆ.

ವಾರ್ನರ್, ಜಾನಿಬೇರ್ ಸ್ಟೊ ಸ್ಥಾನವನ್ನ ಕೇನ್ ವಿಲಿಮ್ಸನ್ ತುಂಬಲಿದ್ದಾರೆ. ಮನೀಶ್ ಪಾಂಡೆ ಫಾರ್ಮ್ಗೆ ಮರಳಿರುವುದು ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ಬಂದಂತೆ ಆಗಿದೆ. ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್ ಉತ್ತಮ ದಾಳಿ ಸಂಘಟಿಸೋಕೆ ಕಾತುರದಿಂದಿದ್ದಾರೆ.

ಹಿಂದಿನ ಪಂದ್ಯದಲ್ಲಿ ದುಬಾರಿಯಾಗಿದ್ದ ರಶೀದ್ ಖಾನ್ ಲಯಕ್ಕೆ ಮರಳಿದ್ರೆ, ರಾಜಸ್ಥಾನ ರಾಯಲ್ಸ್ ಉಡೀಸ್ ಆಗೋದು ಪಕ್ಕ,,

ಒಟ್ನಲ್ಲಿ ಇಂದಿನ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದ್ದು, ತಂಡದ ಘಾಟನುಘಟಿ ಆಟಗಾರರ ಅನುಪಸ್ಥಿತಿಯಲ್ಲಿ ಯಾರು ಗೆಲ್ಲಲ್ಲಿದ್ದಾರೆ ಅನ್ನೊದನ್ನ ಕಾದು ನೋಡಬೇಕಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ