ಬೆಂಗಳೂರು, ಏ.26- ಭಾರತದ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನ ಸ್ವಾಗತ್ ಸಿನೆಮಾಸ್ನಲ್ಲಿ ಜಗತ್ತಿನ ಅತ್ಯಂತ ದೊಡ್ಡ ಓನಿಕ್ಸ್ ಸಿನೆಮಾ ಎಲ್ಇಡಿ ಸ್ಕ್ರೀನ್ನ್ನು ಸ್ಯಾಮ್ಸಂಗ್ ಮತ್ತು ಸಮೂಹ ಸಂಸ್ಥೆ ಹರ್ಮನ್ ಜಂಟಿಯಾಗಿ ಆರಂಭಿಸಿವೆ.
ಬೃಹತ್ 14 ಮೀಟರ್ ಸ್ಕ್ರೀನ್ ಶಕ್ತಿಶಾಲಿ ಮತ್ತು ಪ್ರೇಕ್ಷಕರನ್ನು ಹಿಡಿದಿಡುವಂತಹ ಜೀವನಕ್ಕಿಂತಲೂ ದೊಡ್ಡದಾದ ದೃಶ್ಯಗಳನ್ನು ವಿವರಳಿಗೆ ಹೆಚ್ಚಿನ ಗಮನ ನೀಡುವುದರೊಂದಿಗೆ ಸಾದರಪಡಿಸುತ್ತಿದೆ. ಎಚ್ಡಿಆರ್ ಬೆಂಬಲದೊಂದಿಗೆ ನೈಜ ಬಣ್ಣಗಳನ್ನು ಹೆಚ್ಚು ನಿಖರತೆ ಮತ್ತು ಶಾರ್ಪ್ ಕಾಂಟ್ರಾಸ್ಟ್ಗಳೊಂದಿಗೆ ವಿತರಿಸುವ ಸಾಮಥ್ರ್ಯವನ್ನು ಪರದೆ ಹೊಂದಿರುವುದಲ್ಲದೆ, ಉನ್ನತ ಮಟ್ಟದ ಬ್ರೈಟ್ನೆಸ್ ಮತ್ತು ಅದ್ಭುತ ವೀಕ್ಷಣಾ ಕೋನಗಳನ್ನು ಕೂಡ ಸಾದರಪಡಿಸುತ್ತದೆ.
ಅಕಾಡೆಮೆ ಪ್ರಶಸ್ತಿ ವಿಜೇತರು, ಸಂಗೀತಗಾರರು, ದಾನಿಗಳು ಆದ ಎಆರ್ ರೆಹಮಾನ್ ಈ ನೂತನ ಥಿಯೇಟರ್ ಚಾಲನೆ ನೀಡಿದ್ದು, ಸ್ಯಾಮ್ಸಂಗ್ನ ಭೂಭಂಜಕ ಓನಿಕ್ಸ್ ಸಿನೆಮಾ ಎಲ್ಇಡಿ ಸ್ಕ್ರೀನ್ ತಂತ್ರಜ್ಞಾನ ಮತ್ತು ಹರ್ಮನ್ನ ಐಕಾನಿಕ್ ಜೆಬಿಎಲ್ ಧ್ವನಿ ವ್ಯವಸ್ಥೆ ಜೊತೆಗೆ ಬೆಂಗಳೂರಿನ ಸಿನೆಮಾ ಪ್ರೇಮಿಗಳು ಈ ಥಿಯೇಟರ್ನಲ್ಲಿ ತಮ್ಮ ಅನುಭವವನ್ನು ಅಪಾರವಾಗಿ ಆನಂದಿಸಲಿದ್ದಾರೆ ಎಂದರು.
ಸ್ಯಾಮ್ಸಂಗ್ ಸಹಯೋಗದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಓನಿಕ್ಸ್ ಸಿನೆಮಾ ಎಲ್ಇಡಿ ಸ್ಕ್ರೀನ್ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿರುವುದು ಭಾರತದ ಎಲ್ಲೆಡೆ ಚಲನಚಿತ್ರ ಪ್ರೇಮಿಗಳಿಗೆ ನಮ್ಮ ಬದ್ಧತೆ ಕುರಿತ ಸಾಕ್ಷಿಯಾಗಿದೆ ಎಂದು ಸ್ವಾಗತ್ ಗ್ರೂಪ್ ಆಫ್ ಸಿನೆಮಾಸ್ನ ನಿರ್ದೇಶಕರಾದ ಕಿಶೋರ್ ಪಿ. ಹೇಳಿದರು.