ನೀರವ್ ಮೋದಿ ಜಾಮೀನು ಅರ್ಜಿ ತಿರಸ್ಕರಿಸಿದ ಲಂಡನ್ ನ್ಯಾಯಾಲಯ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ರೂವಾರಿ, ವಜ್ರದ ಉದ್ಯಮಿ ನೀರವ್ ಮೋದಿಯ ಜಾಮೀನು ಅರ್ಜಿಯನ್ನು ಲಂಡನ್ ನ್ಯಾಯಾಲಯ ತಿರಸ್ಕರಿಸಿದೆ.

ನೋರವ್ ಮೋದಿ, ಗಡಿಪಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ 24ರಂದು ನಡೆಯಲಿದ್ದು, ಮೇ 30ರಂದು ಪೂರ್ಣ ಪ್ರಮಾಣದ ವಿಚಾರಣೆ ನಡೆಯಲಿದೆ ಎಂದು ವೆಸ್ಟ್‌ಮಿನ್‌ಸ್ಟರ್ ಕೋರ್ಟ್ ತಿಳಿಸಿದೆ.

ಮಾರ್ಚ್ 19ರಂದು ಬಂಧಿತನಾಗಿದ್ದ ನೀರವ್ ಮೋದಿ ಸದ್ಯ ನೈಋತ್ಯ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿದ್ದಾರೆ.

ಕಳೆದ ತಿಂಗಳು ನಡೆದ ವಿಚಾರಣೆ ವೇಳೆ, ಸಾಕ್ಷಿದಾರರಿಗೆ ಈತ ಜೀವಬೆದರಿಕೆ ಒಡ್ಡಿರುವುದು ಹಾಗೂ ಸಾಕ್ಷ್ಯಾಧಾರಗಳ ನಾಶಕ್ಕೆ ಪ್ರಯತ್ನಿಸಿದ್ದು ಬೆಳಕಿಗೆ ಬಂದಿತ್ತು.

ಆದರೆ ನೀರವ್ ಮೋದಿ ವಕೀಲರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಭಾರತಕ್ಕೆ ಗಡೀಪಾರು ಶಿಕ್ಷೆ ಎದುರಿಸುತ್ತಿರುವ ಇನ್ನೊಬ್ಬ ದೇಶಭ್ರಷ್ಟ ವಿತ್ತಾಪರಾಧಿ ಉದ್ಯಮಿ ವಿಜಯ್‌ ಮಲ್ಯ ಪರ ವಕಾಲತು ನಡೆಸಿದ ತಂಡವೇ ನೀರವ್ ಮೋದಿ ಪರವೂ ವಕಾಲರು ನಡೆಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ