ಪಂಜಾಬ್ ಗುರುದಾಸ್ ಪುರದಿಂದ ಸನ್ನಿ ಡಿಯೋಲ್ ಗೆ ಟಿಕೆಟ್: ವಿನೋದ್ ಖನ್ನಾ ಪತ್ನಿಗೆ ಕೈಕೊಟ್ಟ ಬಿಜೆಪಿ

ಬಿಜೆಪಿ ಪಕ್ಷವು ನನ್ನ ಬೆನ್ನಿಗೆ ಚೂರಿ ಇರಿದಿದೆ : ನಟ ವಿನೋದ್ ಖನ್ನಾ ಪತ್ನಿ ಕವಿತಾ ಖನ್ನಾ

ಚಂಡಿಗಢ: ಪಂಜಾಬ್​ನ ಗುರುದಾಸಪುರದಿಂದ ಈ ಬಾರಿ ಬಿಜೆಪಿ ಬಾಲಿವುಡ್​ ನಟ ಸನ್ನಿ ಡಿಯೋಲ್​ಗೆ ಟಿಕೆಟ್​ ನೀಡಿದೆ. ಈ ಮೂಲಕ ಮಾಜಿ ಸಂಸದ, ನಟ ವಿನೋದ್ ಖನ್ನಾ ಪತ್ನಿ ಕವಿತಾ ಖನ್ನಾ ಬಿಜೆಪಿ ಟಿಕೆಟ್ ವಂಚಿತರಾಗಿದ್ದೆರೆ.

ಬಿಜೆಪಿ ಈ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದ್ದು, 1998, 1999, 2004 ಮತ್ತು 2014ರಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವಿನೋದ್ ಖನ್ನಾ ಪತ್ನಿ ಕವಿತಾ ಖನ್ನಾ ಅವರಿಗೆ ಬಿಜೆಪಿ ಟಿಕೆಟ್ ನೀಡದಿರುವುದು ಬೇಸರಕ್ಕೆ ಕಾರಣವಾಗಿದೆ. ತಮಗೆ ಟಿಕೆಟ್​ ನೀಡದೆ ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡ ಸನ್ನಿ ಡಿಯೋಲ್​ಗೆ ಟಿಕೆಟ್​ ನೀಡಿರುವುದು ಮತದಾರರಿಗೂ ಆಘಾತಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಕ್ಷೇತ್ರದ ಜನತೆಯೊಂದಿಗೆ ಒಡನಾಡುತ್ತಾ ಪರೋಕ್ಷವಾಗಿ ಚುನಾವಣಾ ಪ್ರಚಾರಕ್ಕೂ ಚಾಲನೆ ನೀಡಿದ್ದ ಕವಿತಾ ಬಿಜೆಪಿ ನಡೆ ಬಗ್ಗೆ ಕಿಡಿಕಾರಿದ್ದಾರೆ. ಪಕ್ಷವು ನನ್ನ ಬೆನ್ನಿಗೆ ಚೂರಿ ಇರಿದಿದೆ. ಪಕ್ಷದ ಈ ನಿರ್ಧಾರದಿಂದ ನನಗೆ ಮಾತ್ರವಲ್ಲ, ನನ್ನನ್ನು ಸಂಸತ್​ಗೆ ಕಳುಹಿಸಲು ನಿರ್ಧರಿಸಿದ್ದ ಮತದಾರರ ಮನಸ್ಸಿಗೂ ಘಾಸಿಯನ್ನುಂಟು ಮಾಡಲಾಗಿದೆ. ಆದ್ದರಿಂದ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಸೇರಿ ಇರುವ ಹಲವು ಅವಕಾಶಗಳ ಕುರಿತು ಚಿಂತನೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ