ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಅರೋಪ: ನಿವೃತ್ತ ನ್ಯಾಯಮೂರ್ತಿ ಎ.ಕೆ ಪಟ್ನಾಯಕ್ ನೇತೃತ್ವದ ಸಮಿತಿಯಿಂದ ತನಿಖೆ

ನವದೆಹಲಿ: ಸುಪ್ರೀಂ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಕುರಿತು ನಿವೃತ್ತ ನ್ಯಾಯಮೂರ್ತಿ ಎ.ಕೆ ಪಟ್ನಾಯಕ್ ನೇತೃತ್ವದ ಸಮಿತಿ ತನಿಖೆ ನಡೆಸಲಿದೆ.

ಸುಪ್ರೀಂ ಕೋರ್ಟ್ ಏ.25 ರಂದು ಸಮಿತಿ ರಚನೆ ಮಾಡಿದ್ದು, ನ್ಯಾ.ಪಟ್ನಾಯಕ್ ಅವರು ಕೇಳಿದಾಗ ತನಿಖೆಗೆ ಸಹಕರಿಸಬೇಕೆಂದು ಸಿಬಿಐ, ಐಬಿ ಹಾಗೂ ದೆಹಲಿ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ.

ಸಿಜೆಐ ವಿರುದ್ಧದ ಆರೋಪ ಷಡ್ಯಂತ್ರದ ಭಾಗವೇ ಎಂಬುದನ್ನು ಮಾತ್ರ ವಿಚಾರಣೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಎ.ಕೆ ಪಟ್ನಾಯಕ್ ನೇತೃತ್ವದ ಸಮಿತಿಯ ಕಾರ್ಯವ್ಯಾಪ್ತಿ ಇರಲಿದೆ. ಇದೇ ವೇಳೆ ಸಿಜೆಐ ವಿರುದ್ಧದ ಆರೋಪ ಷಡ್ಯಂತ್ರ ಎಂದು ಪ್ರತ್ಯಾರೋಪ ಮಾಡಿರುವ ವಕೀಲ ಉತ್ಸವ್ ಬೈನ್ಸ್ ಗೆ ಅವರ ಬಳಿ ಇರುವ ಸೂಕ್ತ ಸಾಕ್ಷ್ಯಾ ಧಾರಗಳನ್ನು ಸಲ್ಲಿಕೆ ಮಾಡುವಂತೆ ಸುಪ್ರೀಂ ಸೂಚನೆ ನೀಡಿದೆ.

Former SC Judge A.K. Patnaik to Head Inquiry Into ‘Conspiracy’ Against CJI Gogoi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ