ತುಮಕೂರು,ಏ.25- ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಡಿಸಿಎಂ ಪರಮೇಶ್ವರ್ ಅವರ ಬೆಂಬಲಿಗನ ಮೇಲೆ ಜಾರಕಿಹೊಳಿ ಬೆಂಬಲಿಗರು ಹಲ್ಲೆ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುತ್ತಾರೆ ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸೋಶಿಯಲ್ ಮೀಡಿಯಾದ ದರ್ಶನ್ ಎಂಬುವರು ಫೇಸ್ಬುಕ್ನಲ್ಲಿ ನಿಂದನೆ ಮಾಡಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದ ಕುರಿತು ಆಕ್ರೋಶಗೊಂಡ ರಮೇಶ್ ಬೆಂಬಲಿಗರು ದರ್ಶನ್ ಅವರನ್ನು ಹಿಗ್ಗಾಮುಗ್ಗಾ ಥಳಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ದರ್ಶನ್ ಅವರು ಪರಮೇಶ್ವರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಪರೀಕ್ಷೆ ಬರೆದು ಹೊರ ಬಂದಾಗ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಕ್ಷಮೆ ಕೋರಿದ ವಿಡಿಯೋವನ್ನು ರಮೇಶ್ ಬೆಂಬಲಿಗರು ವೈರಲ್ ಮಾಡಿದ್ದಾರೆ.