ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪೋಟಕ ಬ್ಯಾಟ್ಸಮನ್ . ಈ ಡೆಲ್ಲಿ ಡ್ಯಾಶರ್ ಈ ಬಾರಿಯ ಐಪಿಎಲ್ನಲ್ಲಿ ಅಬ್ಬರಿಸಿದ್ರು ಮುಂಬರುವ ವಿಶ್ವಕಪ್ಗೆ ಮಾತ್ರ ಆಯ್ಕೆಯಾಗಿಲ್ಲ. ಆದ್ರು ರಿಷಭ್ ಪಂತ್ ಕಲರ್ಫುಲ್ ಟೂರ್ನಿಯಲ್ಲಿ ನಿರಾಸೆಯಾಗಿದಕ್ಕೆ ಬ್ಯಾಟ್ ಮೂಲಕವೇ ಉತ್ತರ ಕೊಟ್ಟಿದ್ದಾರೆ.
ವಿಶ್ವಕಪ್ ತಂಡದಿಂದ ತಮ್ಮನ್ನ ಕೈಬಿಟ್ಟ ಆಯ್ಕೆ ಸಮಿತಿಗೆ ಟೀಂ ಇಂಡಿಯಾ ಆಟಗಾರ, ಡೆಲ್ಲಿ ಡ್ಯಾಶರ್ ರಿಷಭ್ ಪಂತ್ ಬ್ಯಾಟ್ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಬ್ಯಾಟ್ ಬೀಸುತ್ತಿರುವ ಪಂತ್,ಮೊನ್ನೆ ರಾಜಸ್ಥಾನ ರಾಯಲ್ಸ್ ವಿರುದ್ಧ ಅಬ್ಬರದ ಅರ್ಧಶತಕ ಬಾರಿಸಿ ಮಿಂಚಿದ್ರು. ಕೇವಲ 36 ಎಸೆತಗಳಲ್ಲಿ 6 ಬೌಂಡರಿ, 4 ಭರ್ಜರಿ ಸಿಕ್ಸರ್ ಮೂಲಕ 78 ರನ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ರು.
ಅಂತಿಮ 12 ಎಸೆತದಲ್ಲಿ ಡೆಲ್ಲಿ ಗೆಲುವಿಗೆ 17 ರನ್ ಬೇಕಿತ್ತು. ರಿಷಬ್ ಪಂತ್ ಸಿಕ್ಸರ್ ಮೂಲಕವೇ ಡೆಲ್ಲಿ ತಂಡಕ್ಕೆ 6 ವಿಕೆಟ್ ಗೆಲುವು ತಂದುಕೊಟ್ಟರು. ಇನ್ನು 4 ಎಸೆತ ಬಾಕಿ ಇರುವಂತೆ ಡೆಲ್ಲಿ ಗೆಲುವಿನ ಕೇಕೆ ಹಾಕಿತು. ಪಂತ್ 36 ಎಸೆತದಲ್ಲಿ ಅಜೇಯ 78 ರನ್ ಸಿಡಿಸಿದರು.
ಅಂಕಪಟ್ಟಿಯಲ್ಲಿ ಮೊದಲ ಬಾರಿ ಅಗ್ರ ಸ್ಥಾನ ಏರಿದ ಡೆಲ್ಲಿ
ಡೆಲ್ಲಿ ಮೊದಲ ಸ್ಥಾನ ಅಲಂಕರಿಸಿರುವುದು ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು. ಡೆಲ್ಲಿ ಡ್ಯಾಶರ್ ರಿಷಬ್ ಪಂತ್ ಕೊನೆಯಲ್ಲಿ ಆಡದಿದ್ರೆ ಡೆಲ್ಲಿ ಮೊದಲ ಸ್ಥಾನ ಏರುತ್ತಿರಲಿಲ್ಲ. ಪಂತ್ ಆಟಕ್ಕೆ ಕೋಚ್ ರಿಕಿ ಪಾಂಟಿಂಗ್, ಮೆಂಟರ್ ಗಂಗೂಲಿ ಫಿದಾ ಆಗಿದ್ದಾರೆ.
ವಿಶ್ವಕಪ್ನಲ್ಲಿ ರಿಷಭ್ ಚಾನ್ಸ್ ಕೊಡುತ್ತಿದ್ದೆ ಎಂದ ವೆಂಗ್ಸರ್ಕಾರ್
ನಾನೇನಾದ್ರೂ ಈಗ ಆಯ್ಕೆ ಸಮಿತಿ ಮುಖ್ಯಸ್ಥ ಆಗಿದ್ರೆ, ವಿಶ್ವಕಪ್ ತಂಡದಲ್ಲಿ ರಿಷಭ್ ಪಂತ್ಗೆ ಚಾನ್ಸ್ ನೀಡುತ್ತಿದ್ದೆ. ಹೀಗಂತ ಟೀಂ ಇಂಡಿಯಾ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ದಿಲೀಪ್ ವೆಂಗ್ಸರ್ಕಾರ್ ಹೇಳಿದ್ದಾರೆ.ರಿಷಬ್ ಪಂತ್ ಒಬ್ಬ ಅದ್ಭುತ ಆಟಗಾರ.ಹೀಗಾಗಿ ವಿಶ್ವಕಪ್ ಟೂರ್ನಿ ಆಡಲು ಪಂತ್ಗೆ ಚಾನ್ಸ್ ಸಿಗುತ್ತೆ ಎಂದು ನಿರೀಕ್ಷೆಸಿದ್ದೆ.ಯಂಗ್ ಹಾಗು ಇನ್ಫಾರ್ಮ್ ಬ್ಯಾಟ್ಸ್ಮನ್ ಆಗಿರೋ ಪಂತ್ಗೆ ವಿಶ್ವಕಪ್ ಆಡಲು ಅವಕಾಶ ನೀಡಬೇಕಿತ್ತು ಎಂದಿದ್ದಾರೆ.
ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್, ದಾದಾ ಖ್ಯಾತಿಯ ಸೌರವ್ ಗಂಗೂಲಿ ಕ್ರಿಕೆಟ್ನಿಂದ ನಿವೃತ್ತಿಯಾಗಿ ದಶಕ ಕಳೆದಿದೆ.ಆದ್ರೆ ಕ್ರಿಕೆಟ್ ಮೇಲಿನ ಅವರ ಪ್ರೀತಿ, ಫ್ಯಾಷನ್,ಅಗ್ರೆಸಿವ್ನೆಸ್ ಮಾತ್ರ ಕಡಿಮೆಯಾಗಿಲ್ಲ. ಐಪಿಎಲ್ 12ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅದ್ಭುತ ಪ್ರದರ್ಶನ ನೀಡ್ತಿದೆ.ಇದರಿಂದ ತಂಡದ ಮೆಂಟರ್ ಆಗಿರುವ ಗಂಗೂಲಿ ಫುಲ್ ಖುಷ್ ಆಗಿದ್ದಾರೆ.ನಿನ್ನೆ ನಡೆದ ರಾಜಸ್ಥಾನ ವಿರುದ್ಧದ ಪಂದ್ಯ ಗೆದ್ದ ನಂತರ, ಗಂಗೂಲಿ ಸಂಭ್ರಮದ ಅಲೆಯಲ್ಲಿ ತೇಲಾಡಿದ್ರು.ಡಗೌಟ್ನಿಂದ ಓಡೋಡಿ ಬಂದು ಗೆಲುವಿಗೆ ಕಾರಣರಾದ ರಿಷಭ್ ಪಂತ್ರನ್ನ ಎತ್ತಿಕೊಂಡು ಕುಣಿದಾಡಿದ್ರು.
ಪಂತ್ ಸಕ್ಸಸ್ ಹಿಂದಿದ್ದಾರೆ ರಿಕಿ ಪಾಂಟಿಂಗ್
ರಿಕಿ ಪಾಂಟಿಂಗ್,ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ನಾಯಕ.ಪಾಂಟಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಎರಡು ಬಾರಿ ವಿಶ್ವಕಪ್ ಸೇರಿದಂತೆ, ಹಲವು ಟ್ರೋಫಿಗಳಿಗೆ ಮುತ್ತಿಟ್ಟಿದೆ.ಕ್ರಿಕೆಟ್ಗೆ ಗುಡ್ಬೈ ಹೇಳಿ ಹಲವು ವರ್ಷಗಳಾಗಿದ್ದರೂ,ಐಪಿಎಲ್ನಲ್ಲಿ ಪಾಂಟಿಂಗ್ ಗುರುತಿಸಿಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಆಗಿ ತಮ್ಮ ಅನುಭವವನ್ನ ಧಾರೆ ಎರೆಯುತ್ತಿದ್ದಾರೆ.ಕಳೆದ ಸೀಸನ್ನಿಂದ ಡೆಲ್ಲಿ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಪಾಂಟಿಂಗ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಟೀಂ ಇಂಡಿಯಾ ಭವಿಷ್ಯದ ಸ್ಟಾರ್ಗಳಾದ ಪೃಥ್ವಿ ಶಾ, ರಿಷಭ್ ಪಂತ್, ಶ್ರೇಯಸ್ರಂತಹ ಆಟಗಾರರಿಗೆ ಬ್ಯಾಟಿಂಗ್ ಟೆಕ್ನಿಕ್ ಹೇಳಿಕೊಡುತ್ತಿದ್ದಾರೆ.ಪರಿಣಾಮ ಈ ಬಾರಿಯ ಐಪಿಎಲ್ನಲ್ಲಿ ಡೆಲ್ಲಿ ಅದ್ಭುತ ಪ್ರದರ್ಶನ ನೀಡ್ತಿದೆ. ಬಲಿಷ್ಠ ತಂಡಗಳನ್ನ ಮಣಿಸುತ್ತಾ ಸದ್ಯ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.ಡೆಲ್ಲಿ ತಂಡಕ್ಕಿಂತ ಮೊದಲು ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ ಪಾಂಟಿಂಗ್ ಕಾರ್ಯನಿರ್ವಹಿಸಿದ್ರು.
ಒಟ್ಟಿನಲ್ಲಿ ವಿಶ್ವಕಪ್ ರಿಷಬ್ ಪಂತ್ ವಿಶ್ವಕಪ್ ಸಿಗದಿದ್ದಕ್ಕೆ ನಿರಾಸೆಯಾಗದೇ ಇನ್ನು ಚೆನ್ನಾಗಿ ಆಡಿ ಮುಂದಿನ ವಿಶ್ವಕಪ್ನಲ್ಲಿ ಆಡಲಿ ಅನ್ನೋದೇ ಎಲ್ಲರ ಆಶಯ.