ಇಂದು ಕೋಲ್ಕತ್ತಾ – ರಾಜಸ್ಥಾನ ನಡುವೆ ಫೈಟ್: ಕೋಲ್ಕತ್ತಾದ ಈಡನ್ ಅಂಗಳದಲ್ಲಿ ಸೇಡಿನ ಸಮರ

ಜೈಪುರದ ತವರಿನ ಅಂಗಳದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಖಭಂಗ ಅನುಭವಿಸಿದ್ದ ರಾಜಸ್ಥಾನ ರಾಯಲ್ಸ್, ಇಂದು ಈಡನ್ ಗಾರ್ಡನ್ ಅಂಗಳದಲ್ಲಿ ಅತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ಮೇಲೆ ರೇಡ್ ಮಾಡೋಕೆ ಸಜ್ಜಾಗಿದೆ. ರಾಜಸ್ಥಾನ ವಿರುದ್ಧದ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಈ ಪಂದ್ಯದಲ್ಲೂ ರಾಜಸ್ಥಾನ ಮೇಲೆ ಸವಾರಿ ಮಾಡುವ ಸಿದ್ಧತೆಯಲ್ಲಿದೆ.

ಇನ್ನೂ ರಾಜಸ್ಥಾನ ವಿರುದ್ಧದ ಮೊದಲ ಪಂದ್ಯದಲ್ಲಿ ಕೆಕೆಆರ್ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಈ ಸೋಲಿನ ಸೇಡು ತೀರಿಸಿಕೊಳ್ಳಲು ಸ್ಟೀವನ್ ಸ್ಮತ್ ಪಡೆ ಕಾತುರದಿಂದ ಕಾಯುತ್ತಿದೆ.

ಆಡಿದ 10 ಪಂದ್ಯದಲ್ಲಿ ಕೇವಲ 3 ಪಂದ್ಯವನ್ನಷ್ಟೆ ಗೆದ್ದಿರುವ ರಾಜಸ್ಥಾನ್‌ಗೆ ಉಳಿದಿರುವ ಪಂದ್ಯಗಳನ್ನು ಜಯಿಸೋ ಅನಿರ್ವಾಯತೆ ಎದುರಾಗಿದೆ. ಈ ಪಂದ್ಯದಲ್ಲಿಯೂ ಸೋತರೆ ಪ್ಲೇಆಫ್ ಕನಸು ಮರೀಚಿಕೆಯಾಗಿಯೇ ಉಳಿಯುತ್ತದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿ ಗೆಲುವಿನ ಟ್ರ್ಯಾಕ್‌ ಏರುವ ತಯಾರಿ ಮಾಡಿಕೊಳ್ಳುತ್ತಿದೆ. ಅಲ್ದೇ ಕೋಲ್ಕತ್ತಾ ತಂಡಕ್ಕೂ ಪ್ಲೇ ಆಫ್ ದೃಷ್ಟಿಯಿಂದ ಮಹತ್ವದ ಪಂದ್ಯವಾಗಿದೆ.

ಪ್ಲೋ…
ಕೆಕೆಆರ್ಗೆ ಗೆಲುವಿನ ಟ್ರ್ಯಾಕ್ಗೆ ಮರಳೋ ಚಿಂತೆ..!
ಹೌದು.. ಟೂರ್ನಿಯ ಆರಂಭದಲ್ಲಿ ಗೆಲುವಿನ ಸಿಹಿ ಕಂಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ಗೆ ಸಾಲುಸಾಲು ಸೋಲು ಎದುರಾಗಿವೆ. ಸತತ 5 ಸೋಲು ಅನುಭವಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್, 5 ಸೋಲುಗಳ ಪೈಕಿ ತವರಿನ ಅಂಗಳದಲ್ಲೇ ಸತತ 4 ಸೋಲು ಕಂಡಿದೆ. ಹೀಗಾಗಿ ಶಾರೂಖ್ ಹುಡುಗರಿಗೆ ಗೆಲುವಿನ ಅಮೃತ ಬೇಕಾಗಿದೆ. ಹಿಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ತವರಿನ ಅಂಗಳದಲ್ಲಿ ಹೀನಾಯವಾಗಿ ಸೋತರು, ಮತ್ತೆ ಇಂದು ಗೆಲ್ಲುವ ಆತ್ಮ ವಿಶ್ವಾಸದಿಂದ ಕಣಕ್ಕಿಳಿಯುತ್ತಿದ್ದಾರೆ.

ಇನ್ನೂ ಕೋಲ್ಕತ್ತಾ ತಂಡದಲ್ಲಿ ಘಟಾನುಘಟಿ ಬ್ಯಾಟ್ಸ್ಮನ್ಗಳಿದ್ದರು ವಿದೇಶಿ ಆಟಗಾರರ ಮೇಲೆಯೇ ತಂಡ ಹೆಚ್ಚು ಅವಲಂಭಿತವಾಗಿದೆ. ಕ್ರಿಸ್ ಲೀನ್, ಸುನೀಲ್ ನರೈನ್ ಉತ್ತಮ ಆರಂಭ ನೀಡುತ್ತಿದ್ದು, ಅದನ್ನೇ ಇಂದು ಮುಂದುವರಿಸಬೇಕಿದೆ. ಶುಭ್ಮನ್ ಗಿಲ್ ಒಂದು ಪಂದ್ಯ ಮಿಂಚಿದ್ದು ಬಿಟ್ರೆ ಉಳಿದ ಪಂದ್ಯಗಳಲ್ಲಿ ಹೇಳಿಕೊಳ್ಳುವ ಆಟ ಆಡಿಲ್ಲ. ನಾಯಕ ದಿನೇಶ್ ಕಾರ್ತಿಕ್ ಸಹ ನಾಯಕ ಆಟ ಆಡುವಲ್ಲಿ ವಿಫಲವಾಗಿರುವುದು ತಂಡಕ್ಕೆ ಬಹುದೊಡ್ಡ ಸಮಸ್ಯೆ ಆಗಿ ಕಾಡುತ್ತಿದೆ.

ಮ್ಯಾಚ್ ವಿನ್ನರ್ ಆಂಡ್ರೋ ರಸೆಲ್ ಅಬ್ಬರಿಸಿದ್ರೆ ಮಾತ್ರ ತಂಡಕ್ಕೆ ಜಯ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಲ್ಕತ್ತಾ ಗೆಲ್ಲಬೇಕಾದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಟವಾಡಬೇಕಿದೆ..

ಇನ್ನೂ ಕಳೆದೆರಡು ಪಂದ್ಯಗಳಿಂದ ಕೋಲ್ಕತ್ತಾ ಬೌಲರ್ಗಳಿಂದ ಹೇಳಿಕೊಳ್ಳುವಂತ ಪ್ರದರ್ಶನ ಬಂದಿಲ್ಲ. ಹೀಗಾಗಿಯೇ ನಾಯಕ ದಿನೇಶ್ ಕಾರ್ತಿಕ್ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ತಂದ್ರು, ಬೌಲರ್ಸ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ಫೇಲ್ ಆಗಿದ್ದಾರೆ.

ರಾಜಸ್ಥಾನ ರಾಯಲ್ಸ್ಗೆ ಸೇಡಿನ ಸಮರ..!
ಸ್ಟೀವನ್ ಸ್ಮಿತ್ ನಾಯಕತ್ವದಲ್ಲಿ ಮುಂಬೈ ವಿರುದ್ಧ ಜಯಿಸಿದ್ದ ರಾಜಸ್ಥಾನ ರಾಯಲ್ಸ್, ನಂತರದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರಹಾನೆ ಶತಕದ ಹೊರತಾಗಿಯೂ ತವರಿನ ಅಂಗಳದಲ್ಲಿ ಮುಖಭಂಗ ಅನುಭವಿಸಿತು. ನಾಯಕ ಸ್ಥಾನ ತ್ಯಜಿಸಿದ ಬಳಿಕ ಅಜಿಕ್ಯಾ ರಹಾನೆ ಸಖತ್ ಶೈನ್ ಆದಂತೆ ಕಾಣಿಸ್ತಿದ್ದಾರೆ. ಸಂಜು ಸ್ಯಾಮ್ಸನ್, ಸ್ಟೀವನ್ ಸ್ಮಿತ್ ಉತ್ತಮ ಫಾರ್ಮ್ನಲ್ಲಿ ಇದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬೆನ್ ಸ್ಟೋಕ್ ಇಂದಾದ್ರೂ ಅಬ್ಬರಿಸಬೇಕಿದೆ. ಮ್ಯಾಚ್ ಟರ್ನ್ ಮಾಡ್ತಾರೆ ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ಟರ್ನರ್ ಹ್ಯಾಟ್ರಿಕ್ ಡಕ್ ಔಟ್ ಆಗೋ ಮೂಲಕ ನಿರಾಸೆ ಮೂಡಿಸಿದ್ದಾರೆ. ಸ್ಲಾಗ್ ಓವರ್ನಲ್ಲಿ ಬಿನ್ನಿ ಅಬ್ಬರಿಸ್ತಿರೋದು ರಾಯಲ್ಸ್ಗೆ ನೆಮ್ಮದಿಯ ವಿಚಾರ.. ಹೀಗಾಗಿ ಮುಂದಿನ ಘಟಕ್ಕೆ ತಲುಪಬೇಕಾದ್ರೆ ಸ್ಮಿತ್ ಪಡೆ ಎಚ್ಚೆತ್ತು ಆಡಬೇಕಿದೆ.

ಇನ್ನೂ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ದುಬಾರಿ ಬೌಲಿಂಗ್ಗೆ ಬೆಲೆ ತ್ತೆತ್ತಿರುವ ರಾಜಸ್ಥಾನ್, ಇಂದಿನ ಪಂದ್ಯದಲ್ಲಿ ಹೊಸ ಯೋಜನೆಗಳೊಂದಿಗೆ ಕಣಕ್ಕಿಳಿಯುತ್ತಿದೆ. ಜೋರ್ಫಾ ಅರ್ಚರ್, ಧವಳ್ ಕುಲಕರ್ಣಿ, ಜಯದೇವ್ ಉನಾದ್ಕಟ್, ಶ್ರೇಯಸ್ ಗೋಪಾಲ್ ಎದುರಾಳಿಗಳ ಮೇಲೆ ಸವಾರಿ ಮಾಡಿದ್ರೆ , ಇಂದಿನ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗೆಲ್ಲುವುದರಲ್ಲಿ ಡೌಟೇ ಇಲ್ಲಾ..

ಕೋಲ್ಕತ್ತಾದ ಈಡನ್ ಅಂಗಳದಲ್ಲಿ ಸೇಡಿನ ಸಮರ
ಜೈಪುರದ ತವರಿನ ಅಂಗಳದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಖಭಂಗ ಅನುಭವಿಸಿದ್ದ ರಾಜಸ್ಥಾನ ರಾಯಲ್ಸ್, ಇಂದು ಈಡನ್ ಗಾರ್ಡನ್ ಅಂಗಳದಲ್ಲಿ ಅತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ಮೇಲೆ ರೇಡ್ ಮಾಡೋಕೆ ಸಜ್ಜಾಗಿದೆ. ರಾಜಸ್ಥಾನ ವಿರುದ್ಧದ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಈ ಪಂದ್ಯದಲ್ಲೂ ರಾಜಸ್ಥಾನ ಮೇಲೆ ಸವಾರಿ ಮಾಡುವ ಸಿದ್ಧತೆಯಲ್ಲಿದೆ.

ಇನ್ನೂ ರಾಜಸ್ಥಾನ ವಿರುದ್ಧದ ಮೊದಲ ಪಂದ್ಯದಲ್ಲಿ ಕೆಕೆಆರ್ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಈ ಸೋಲಿನ ಸೇಡು ತೀರಿಸಿಕೊಳ್ಳಲು ಸ್ಟೀವನ್ ಸ್ಮತ್ ಪಡೆ ಕಾತುರದಿಂದ ಕಾಯುತ್ತಿದೆ. ಆಡಿದ 10 ಪಂದ್ಯದಲ್ಲಿ ಕೇವಲ 3 ಪಂದ್ಯವನ್ನಷ್ಟೆ ಗೆದ್ದಿರುವ ರಾಜಸ್ಥಾನ್‌ಗೆ ಉಳಿದಿರುವ ಪಂದ್ಯಗಳನ್ನು ಜಯಿಸೋ ಅನಿರ್ವಾಯತೆ ಎದುರಾಗಿದೆ. ಈ ಪಂದ್ಯದಲ್ಲಿಯೂ ಸೋತರೆ ಪ್ಲೇಆಫ್ ಕನಸು ಮರೀಚಿಕೆಯಾಗಿಯೇ ಉಳಿಯುತ್ತದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿ ಗೆಲುವಿನ ಟ್ರ್ಯಾಕ್‌ ಏರುವ ತಯಾರಿ ಮಾಡಿಕೊಳ್ಳುತ್ತಿದೆ. ಅಲ್ದೇ ಕೋಲ್ಕತ್ತಾ ತಂಡಕ್ಕೂ ಪ್ಲೇ ಆಫ್ ದೃಷ್ಟಿಯಿಂದ ಮಹತ್ವದ ಪಂದ್ಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ