ಅಹಮದಾಬಾದ್ ನ ರಾನಿಪ್ ಮತಗಟ್ಟೆಯಲ್ಲಿ ಪ್ರಧಾನಿ ಮೋದಿ ಮತದಾನ

ಅಹಮದಾಬಾದ್: ಲೋಕಸಭಾ ಚುನಾವಣೆಯ ಮೂರನೆ ಹಂತದ ಮತದಾನ ಆರಂಭವಾಗಿದ್ದು, ಪ್ರಧಾನಿ ಮೋದಿ ಗುಜರಾತ್ ನ ಅಹಮಾದಾಬಾದ್ ನ ರಾನಿಪ್ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ.

ಮತದಾನಕ್ಕೂ ಮುನ್ನ ಅಹಮದಾಬಾದ್‌ನಲ್ಲಿ ತಾಯಿ ಹೀರಾಬೆನ್‌ ಅವರ ಆಶೀರ್ವಾದ ಪಡೆದ ಪ್ರಧಾನಿ ಮೋದಿ, ಬಳಿಕ ಮತ ಚಲಾಯಿಸಲು ತೆರಳಿದರು. ತೆರದ ವಾಹನದಲ್ಲಿ ಆಗಮಿಸಿ ಆಹಮದಾಬಾದ್‌ನ ರಾನಿಪ್‌ನಲ್ಲಿ ಹಕ್ಕು ಚಲಾವಣೆ ಮಾಡಿದ್ದಾರೆ.

ಮತಗಟ್ಟೆಯ ಬಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಸ್ವಾಗತಿಸಿದರು. ಸಾವಿರಾರು ಅಭಿಮಾನಿಗಳು ಮೋದಿ ಮೋದಿ ಎಂಬ ಜೈಕಾರವನ್ನು ಕೋಗಿದರು.

ಮತದಾನದ ಬಳಿಕ ಮಾತನಾಡಿದ ಪ್ರಧಾನಿ, ನಾನು ಮತದಾನ ಮಾಡಿ ಪ್ರಜಾಪ್ರಭುತ್ವದ ಪಾಲುದಾರನಾಗಿದ್ದೇನೆ. ನನಗೂ ಮತದಾನ ಮಾಡುವ ಸೌಭಾಗ್ಯ ಸಿಕ್ಕಿದೆ. ಎಲ್ಲರೂ ಮತದಾನ ಮಾಡಿ ಎಂದು ಕರೆ ನೀಡಿದರು.

ಕುಂಭ ಮೇಳದಲ್ಲಿ ಸ್ನಾನ ಮಾಡಿ ಪವಿತ್ರವಾಗುವ ಅನುಭವದಂತೆ, ಲೋಕತಂತ್ರದ ಪವಿತ್ರ ಕಾರ್ಯ ಮತದಾನ ಮಾಡಿದ ಬಳಿಕ ಆಗಿದೆ. ಲೋಕತಂತ್ರದ ಮಹಾನ್‌ ಉತ್ಸವದಲ್ಲಿ ನನಗೆ ಭಾಗಿಯಾಗಲು ಅವಕಾಶ ದೊರಕಿದೆ. ಎಲ್ಲಾ ಮತದಾರರು ವಿವೇಕಹೊಂದಿದವರು. ಹಾಲನ್ನು ಹಾಲಾಗಿ, ನೀರನ್ನು ನೀರಾಗಿ ನೋಡುವ ವಿವೇಚನೆ ಉಳ್ಳವರು,ಎಲ್ಲರೂ ಉತ್ಸಾಹದಿಂದ ಹಕ್ಕು ಚಲಾಯಿಸಿ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ