ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು, 14 ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.
ರಾಜ್ಯ ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 7.38 ರಷ್ಟು ಮತದಾನವಾಗಿದೆ.
ಚಿಕ್ಕೋಡಿಯಲ್ಲಿ ಶೇಕಡಾ 8.62, , ಬೆಳಗಾವಿಯಲ್ಲಿ 7.04, , ಬಾಗಲಕೋಟೆಯಲ್ಲಿ 6.83, ವಿಜಯಪುರದಲ್ಲಿ 6.89, ಗುಲ್ಬರ್ಗದಲ್ಲಿ 5.95, ರಾಯಚೂರಿನಲ್ಲಿ 6.49, ಬೀದರ್ ನಲ್ಲಿ 6.25, ಕೊಪ್ಪಳದಲ್ಲಿ 7.51, ಬಳ್ಳಾರಿಯಲ್ಲಿ 9.13, ಹಾವೇರಿಯಲ್ಲಿ 5.95, ಧಾರವಾಡದಲ್ಲಿ 8.27, ಉತ್ತರ ಕನ್ನಡ ಶೇಕಡಾ 8.47, ದಾವಣಗೆರೆಯಲ್ಲಿ 6.88 ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ 10.12ರಷ್ಟು ಮತದಾನವಾಗಿದೆ.