ಬೆಂಗಳೂರು, ಏ.23-ವರನಟ, ಪದ್ಮಭೂಷಣ ಡಾ.ರಾಜ್ಕುಮಾರ್ ಅವರ 91ನೇ ಹುಟ್ಟುಹಬ್ಬಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಭಾಶಯ ಕೋರಿದ್ದಾರೆ. ನಾಳೆ ಡಾ.ರಾಜ್ಕುಮಾರ್ ಅವರ ಹುಟ್ಟುಹಬ್ಬವನ್ನು ರಾಜ್ಯಸರ್ಕಾರ ರಾಜ್ಯದೆಲ್ಲೆಡೆ ಆಚರಿಸುತ್ತಿದ್ದು, ಎಲ್ಲರೂ ಭಾಗವಹಿಸುವಂತೆ ಟ್ವೀಟರ್ ಮೂಲಕ ಮುಖ್ಯಮಂತ್ರಿ ಕರೆ ನೀಡಿದ್ದಾರೆ.
ಕನ್ನಡ ನಾಡಿನ ಸಾಂಸ್ಕøತಿಕ ರಾಯಭಾರಿಯಾಗಿರುವ ರಾಜ್ಕುಮಾರ್ ಅವರು ತೆರೆಯ ಮೇಲಷ್ಟೇ ಅಲ್ಲ, ಅವರ ಔದಾರ್ಯ, ಅಂತಃಕರಣ, ಜೀವನ ಮೌಲ್ಯಗಳು ಅನುಕರಣೀಯವಾಗಿವೆ ಎಂದು ಹೇಳಿದ್ದಾರೆ.