ಬೆಂಗಳೂರು, ಏ.22- ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿಯನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಖಂಡಿಸಿದರು.
ನಗರದಲ್ಲಿ ಇಂದು ನಡೆದ ಬೆಂಗಳೂರು ವಿಶ್ವ ವಿದ್ಯಾಲಯದ 54ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಯೋತ್ಪಾದನೆ ಮೇಲೆ ಕ್ರಮ ಕೈಗೊಳ್ಳದಿದ್ದರೆ ವಿಶ್ವಕ್ಕೆ ಕಷ್ಟವಾಗುತ್ತದೆ.ಯುವಕರು ಎಚ್ಚೆತ್ತುಕೊಳ್ಳಬೇಕು ಪ್ರತಿಯೊಂದು ದೇಶವು ಭಯೋತ್ಪಾದನೆ ಬಗ್ಗೆ ಗಮನಹರಿಸಬೇಕು ಎಂದರು.
ಶ್ರೀಲಂಕಾದಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರ ದಾಳಿಯಾಗಿರುವುದನ್ನು ಖಂಡಿಸುತ್ತೇವೆ. ಭಯೋತ್ಪಾದಕರ ಮೇಲೆ ಕ್ರಮ ಕೈಗೊಳ್ಳಬೇಕು.ಭಾರತ ಅಷ್ಟೆ ಅಲ್ಲ ಯಾವುದೇ ದೇಶವು ಸುರಕ್ಷಿತವಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಉಗ್ರರ ಮೇಲೆ ಹಾಗೂ ಉಗ್ರರಿಗೆ ಸಹಕಾರ ನೀಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ನಿನ್ನೆ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ 215ಕ್ಕೂ ಹೆಚ್ಚು ಅಮಾಯಕರು ಮೃತಪಟ್ಟಿದ್ದಾರೆ.ಉಗ್ರರಿಗೆ ಹೈದ್ರಾಬಾದ್ನಂತಹ ಪ್ರಮುಖ ನಗರಗಳೇ ಗುರಿಯಾಗಿವೆ ಎಂದು ವಿಷಾಧಿಸಿದರು.