ಬೆಂಗಳೂರು, ಏ.21- ವ್ಹಿಲೀಂಗ್ ಮಾಡುತ್ತಿದ್ದ ಸವಾರರನ್ನು ಪರಿಶೀಲಿಸುತ್ತಿದ್ದ ವೇಳೆ ಯಲಹಂಕ ಪೋಲೀಸ್ ಠಾಣೆಯ ಕಾನ್ಸ್ಟೇಬಲ್ ಮಾರ್ತಾಂಡಪ್ಪ ಅವರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದಾರೆ.
ಮಾರ್ತಾಂಡಪ್ಪ ಮತ್ತು ಅವರ ಸಿಬ್ಬಂದಿ ಯಲಹಂಕ ಏರ್ಪೋರ್ಟ್ ರೋಡ್ನಲ್ಲಿ ವ್ಹಿಲೀಂಗ್ ಮಾಡುತ್ತಿದ್ದವರನ್ನು ತಡೆದು ಪರಿಶೀಲಿಸುತ್ತಿದ್ದರು.
ಮುಂಜಾನೆ 3.30ರ ಸಮಯದಲ್ಲಿ ದ್ವಿಚಕ್ರ ವಾಹನವೊಂದನ್ನು ತಡೆಯಲು ಹೋದಾಗ ಸವಾರ ಮಾರ್ತಾಂಡಪ್ಪ ಅವರಿಗೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೆ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದಾನೆ.
ಡಿಕ್ಕಿಯಿಂದ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ಬಗ್ಗೆ ಯಲಹಂಕ ಸಂಚಾರಿ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ದ್ವಿಚಕ್ರ ವಾಹನ ಸವಾರನಿಗಾಗಿ ಶೋಧ ನಡೆಸುತ್ತಿದ್ದಾರೆ.