ಹಾವೇರಿ: ಪ್ರಧಾನಿ ಮೋದಿ ಮುಖ ಸರಿ ಇಲ್ಲದ್ದಕ್ಕೆ ಪತ್ನಿಯೇ ಅವರನ್ನು ಬಿಟ್ಟಿದ್ದಾರೆ. ಈಗ ಪತ್ನಿ ಬಿಟ್ಟವರ ಮುಖ ನೋಡಿ ನಾವು ಮತ ನೀಡಬೇಕೇ ಎಂದು ಸಚಿವ ಜಮೀರ್ ಅಹ್ಮದ್ಖಾನ್ ಪ್ರಶ್ನೆ ಮಾಡಿದ್ದಾರೆ.
ಹಾವೇರಿಯಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎರಡುಬಾರಿ ಎಂಪಿಯಾಗಿರುವ ಉದಾಸಿ ಹೇಳುತ್ತಿದ್ದಾರೆ ನನ್ನ ಮುಖ ನೋಡ ಬೇಡಿ, ಮೋದಿ ಮುಖ ನೋಡಿ ಮತ ನೀಡಿ ಎಂದು ಪ್ರಚಾರ ನಡೆಸುತ್ತಾರೆ. ನಮ್ಮ ಸಾಧನೆಯನ್ನು ಹೇಳಿ ಅದರಿಂದ ಮತಯಾಚನೆ ಮಾಡಬೇಕೆ ಹೊರತು ಮೋದಿ ಮುಖ ನೋಡಿ ಮತ ನೀಡಿ ಎನ್ನುವುದಲ್ಲ. ಶಿವಕುಮಾರ್ ಉದಾಸಿ ಮುಖ ನೋಡಿ ವೋಟ್ ಹಾಕಬಾರದು ಅನ್ನುವುದಾದರೆ ಅವರು ಬುರ್ಖಾ ಧರಿಸಿ ಪ್ರಚಾರ ನಡೆಸುವುದು ಉತ್ತಮ ಎಂದರು.
ಇನ್ನು ಮೋದಿ ಮುಖ ನೋಡಿ ಮತ ಕೇಳುತ್ತಿದ್ದಾರೆ. ಪ್ರಧಾನಿ ಮೋದಿ ದೇಶಕ್ಕಾಗಿ ಏನು ಒಳ್ಳೆ ಕೆಲಸ ಮಾಡಿದರು..? ಒಂದು ಒಳ್ಳೆಯ ಸಾಧನೆ ಮಾಡಿದ್ದಾರಾ..? ಗ್ಯಾಸ್ ರೇಟ್, ಡೀಸೆಲ್ ರೇಟ್ ಎಲ್ಲವನ್ನೂ ಹೆಚ್ಚಳ ಮಾಡಿದ್ದಾರೆ. ಅಲ್ಲದೇ ಮೋದಿ ಮುಖ ನೋಡಕ್ಕಾಗಲ್ಲ, ಅವರ ಮುಖ ಸರಿಯಿಲ್ಲ ಅಂತ ಇರುವ ಒಬ್ಬ ಹೆಂಡತಿಯೂ ಅವರನ್ನು ಬಿಟ್ಟಿದ್ದಾರೆ. ಅಂತವರ ಮುಖ ನೋಡಿ ಜನ ವೋಟ್ ಹಾಕಬೇಕೆ? ಮೋದಿ ಮುಖ ನೋಡಿ ನಾವು ಮತ ಹಾಕಬೇಕಾ ಎಂದು ಕೇಳಿದ್ದಾರೆ.
ಐದು ವರ್ಷ ಕ್ಷೇತ್ರದ ಎಂಪಿ ಆಗಿದ್ದ ನಿಮ್ಮ ಸಾಧನೆ ಶೂನ್ಯ. ನಿಮ್ಮ ಮುಖ ನೋಡ ಬೇಡಿ ಅಂದರೆ ಬುರ್ಖಾ ಹಾಕಿಕೊಂಡು ಬನ್ನಿ. ಹೊಸ ಬುರ್ಖಾ ನಾನೇ ನೀಡುತ್ತೇನೆ ಎಂದು ಶಿವಕುಮಾರ್ ಉದಾಸಿಗೆ ಟಾಂಗ್ ನೀಡಿದ ಜಮೀರ್ ಅಹ್ಮದ್, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯರೇ ನಮ್ಮ ಮುಖ್ಯಮಂತ್ರಿ. ಕುಮಾರಸ್ವಾಮಿ ಐದು ವರ್ಷ ಸಿಎಂ ಆಗಿರುತ್ತಾರೆ. ಬಿಜೆಪಿಯವರು ಸರ್ಕಾರ ರಚನೆಗೆ ಪ್ರಯತ್ನ ಮಾಡುತ್ತಿದ್ದು, ಅದು ಯಾವ ಕಾರಣಕ್ಕೂ ಯಶಸ್ವಿ ಆಗಲ್ಲ ಎಂದರು.
ಇದೇ ವೇಳೆ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಅವರಿಗೆ ಟಾಂಗ್ ನೀಡಿದ ಜಮೀರ್, ಐದು ವರ್ಷ ಕ್ಷೇತ್ರದ ಎಂಪಿ ಆಗಿದ್ದ ನಿಮ್ಮ ಸಾಧನೆ ಶೂನ್ಯ. ನಿಮ್ಮ ಮುಖ ನೋಡ ಬೇಡಿ ಅಂದರೆ ಬುರ್ಖಾ ಹಾಕಿಕೊಂಡು ಬನ್ನಿ. ಹೊಸ ಬುರ್ಖಾ ನಾನೇ ನೀಡುತ್ತೇನೆ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯರೇ ನಮ್ಮ ಮುಖ್ಯಮಂತ್ರಿ.
ಕುಮಾರಸ್ವಾಮಿ ಐದು ವರ್ಷ ಸಿಎಂ ಆಗಿರುತ್ತಾರೆ. ಬಿಜೆಪಿಯವರು ಸರ್ಕಾರ ರಚನೆಗೆ ಪ್ರಯತ್ನ ಮಾಡುತ್ತಿದ್ದು, ಅದು ಯಾವ ಕಾರಣಕ್ಕೂ ಯಶಸ್ವಿ ಆಗಲ್ಲ.
ಅಲ್ಲದೇ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.