ತಮ್ಮ ವಿರುದ್ಧದ ಲೈಂಗಿಕ ಕಿರಿಕುಳ ಆರೋಪದ ಹಿಂದೆ ದೊಡ್ಡ ಪಿತೂರಿಯೇ ಇದೆ: ಮುಖ್ಯ ನ್ಯಾಯಮೂರ್ತಿ ಗೊಗೋಯ್

ನವದೆಹಲಿ: ತಮ್ಮ ವಿರುದ್ಧದ ಲೈಂಗಿಕ ಕಿರಿಕುಳ ಆರೋಪದ ಹಿಂದೆ ದೊಡ್ಡ ಪಿತೂರಿಯೇ ಇದೆ. ಇದೊಂದು ಸತ್ಯಕ್ಕೆ ದೂರವಾದ ಆರೋಪ ಎಂದು ಭಾರತದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಹೇಳಿದ್ದಾರೆ.

ವಿಚಾರಣೆ ವೇಳೆ ಮಾತನಾಡಿರುವ ರಂಜನ್ ಗೊಗೊಯ್‌, ಈ ರೀತಿಯ ಆರೋಪಗಳಿಗೆ ಉತ್ತರಿಸಲು ನಾನು ಕೆಳಮಟ್ಟಕ್ಕೆ ಇಳಿಯಲು ಬಯಸುವುದಿಲ್ಲ. ಈ ಆರೋಪದ ಹಿಂದೆ ಪಿತೂರಿಯಿದ್ದು, ಇದರ ಹಿಂದೆ ದೊಡ್ಡ ಶಕ್ತಿ ಇರಬೇಕು. ಅವರು ಮುಖ್ಯ ನ್ಯಾಯಮೂರ್ತಿಗಳ ಕಚೇರಿಯನ್ನು ನಿಷ್ಕ್ರಿಯಗೊಳಿಸಲು ಬಯಸುತ್ತಿದ್ದಾರೆ ಎಂದಿದ್ದಾರೆ.

ಮುಂದಿನ ವಾರ ಪ್ರಮುಖ ಪ್ರಕರಣವೊಂದರ ವಿಚಾರಣೆಗಾಗಿ ನನ್ನನ್ನು ನಿಯೋಜಿಸಲಾಗಿದೆ. ಅದನ್ನು ತಪ್ಪಿಸುವ ಹುನ್ನಾರವಾಗಿ ನನ್ನ ಮೇಲೆ ಆರೋಪ ಹೊರಿಸಲಾಗಿದೆ. ಆದರೆ, ನಾನು ಈ ಖುರ್ಚಿಯಲ್ಲಿಯೇ ಕುಳಿತುಕೊಳ್ಳುತ್ತೇನೆ ಮತ್ತು ಯಾವುದೇ ಭಯವಿಲ್ಲದೆ ನ್ಯಾಯಾಂಗದ ಕಾರ್ಯಗಳನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

ಸಿಜೆಐ ಕಛೇರಿಯನ್ನು ನಿಷ್ಕ್ರಿಯಗೊಳಿಸಲು ಅವರು ಬಯಸುತ್ತಿದ್ದಾರೆ, 20 ವರ್ಷಗಳ ಸೇವೆಯ ಬಳಿಕ ಭಾರತದ ಮುಖ್ಯ ನ್ಯಾಯಮೂರ್ತಿಗೆ ಇಂತಹಾ ಉಡುಗೊರೆ ಸಿಕ್ಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಗೊಗೋಯ್,ಇದು ನಂಬಲಾಗದ ಆರೋಪ, , 20 ವರ್ಷಗಳ ನಿಸ್ವಾರ್ಥ ಸೇವೆಯ ನಂತರ ನ್ಯಾಯಾಧೀಶನಾಗಿ ನೇಮಕವಾಗಿದ್ದು ನನ್ನ ಬ್ಯಾಂಕ್ ಬ್ಯಾಲೆನ್ಸ್ 6.80 ಲಕ್ಷ ರು. ಆಗಿದೆ. ಹಣದಿಂದ ಯಾರೂ ನನ್ನನ್ನು ಖರೀದಿಸಲು ಬರುವುದಿಲ್ಲ.ಹಾಗಾಗಿ ಅವರು ಮತ್ತೇನಾದರೂ ದಾರಿ ಹುಡುಕಬೇಕು ಎಂದಿದ್ದಾರೆ.

ಇನ್ನು ಗೊಗೊಯ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳ ಬಗ್ಗೆ ಮಾಧ್ಯಮದ ಬುದ್ಧಿಮತ್ತೆಗೆ ಇದನ್ನು ಬಿಡುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮಂಡಳಿಯ ಸ್ವಾತಂತ್ರವು ಅಪಾಯದಲ್ಲಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಈ ಸಂಬಂಧ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ.

There has to be bigger force behind this: CJI on sexual harassment charges

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ