ಬೀದರ್: ಸ್ವ ಹಿತಾಸಕ್ತಿ ಹಾಗೂ ತಮ್ಮ ಪಕ್ಷದ ಸಂಘಟನೆ ಮಾತ್ರ ಬಯಸುವ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಗಳಿಗೆ ತಿರಸ್ಕರಿಸಿ, ಸದಾ ಜನರ ನಡುವೆ ಇರುವ ನನ್ನನ್ನು ಬೆಂಬಲಿಸಬೇಕು ಎಂದು ಪಕ್ಷೇತರ ಅಭ್ಯರ್ಥಿ ಮೌಲಪ್ಪ ಮಾಳಗೆ ಮನವಿ ಮಾಡಿದರು.
ತಾಲೂಕಿನ ಅಲಿಯಾಬಾದ್, ಚೋಂಡಿ, ಮಮದಾಪೂರ ಗ್ರಾಮದಲ್ಲಿ ಮನೆ, ಮನೆಗೆ ತೆರಳಿ ಮತಯಾಚನೆ ಮಾಡಿ, ಈ ಚುನಾವಣೆ ಜನರ ಚುನಾವಣೆಯಾಗಿದೆ. ಹಿಂದಿನ ಚುನಾವಣೆ ಗಿಂತ ಈ ಬಾರಿ ಸಾರ್ವಜನಿಕ ನೇರವಾಗಿ ಭಾಗಿಯಾಗಿದ್ದರೆ. ಸಾಮನ್ಯ ವ್ಯಕ್ತಿ ಯಾದ ನನಗೆ ಗೆಲ್ಲಿಸುವ ಮೂಲಕ ದೇಶಕ್ಕೆ ಹೊಸ ಸಂದೇಶ ಕೊಡಬೇಕು ಎಂದು ಹೇಳಿದರು.
ರಾಷ್ಟ್ರೀಯ ಪಕ್ಷಗಳು ಹಣ ಬಲ, ತೋಳ್ಬಲದ ಮೇಲೆ ಚುನಾವಣೆ ನಡೆಸುತಗತಿದ್ದರೆ, ನಾನು ಜಿಲ್ಲೆಯ ಎಲ್ಲೆಡೆ ಅಭೂತಪೂರ್ವ ಸಿಗುತ್ತಿರುವ ಮತದಾರರ ಬೆಂಬಲದ ಮೇಲೆ ಚುನಾವಣೆ ಎದುರಿಸುತ್ತಿರುವೆ ಎಂದು ಮೌಲಪ್ಪ ಮಾಳಗೆ ಹೇಳಿದರು.
ಪಕ್ಷೇತರ ಅಭ್ಯರ್ಥಿ ಯಾದ ನನಗೆ ರೈತನ ಬೆನ್ನೆಲುಬು ಆದ ಟ್ರ್ಯಾಕ್ಟರ್ ಚಿಹ್ನೆ ಸಿಕ್ಕಿದೆ. ಈ ಚಿಹ್ನೆ ಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ನಾನು ಅಂಗವಿಕಲ. ಆದರೂ ಸಹ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಚುನಾವಣೆ ಗೆ ಸ್ಪರ್ಧಿಸಿದ್ದೇನೆ. ಈ ಬಾರಿ ನನಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.