ಬೆಂಗಳೂರು, ಏ.20-ಒಂದು ಗಂಟೆ ತಡೆರಹಿತ ನೌಕಾಸನಗಳ ಸಾಧನೆ ಮಾಡುವುದರ ಮೂಲಕ ಯೋಗಾಸನದಲ್ಲಿ ಮೊದಲನೆ ಬಾರಿ ಪ್ರೊ.ಡಾ.ಎಸ್.ರಮೇಶ್ ಬಾಬು ವಿಶ್ವ ದಾಖಲೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.14ರಂದು ಕೊಡಿಗೇಹಳ್ಳಿಯ ಟಾಟಾನಗರದ ಪ್ರೊ.ಸತೀಶ್ ಧಾವನ್ ಉದ್ಯಾನವನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡು ಬೆಳಗ್ಗೆ 7.30ರಿಂದ 8.30 ರವರೆಗೆ ನಿಮಿಷಕ್ಕೆ 10.9 ರಂತೆ ಒಂದು ಗಂಟೆಯ ಒಳಗೆ 652 ನೌಕಾಸನಗಳ ಮಾಡುವ ಮೂಲಕ 84ನೇ ದಾಖಲೆ ಮಾಡಿರುವುದಾಗಿ ತಿಳಿಸಿದರು.
ದಾಖಲೆ ಧೃಡೀಕರಣ ಅಧಿಕಾರಿಗಳಾದ ಯೋಗ ಗುರುಗಳಾದ ಮಾಲ ಮನೋಹರ್, ಯೋಗ ಶರೋಮಣಿವಶ್ಯಾಮ ಕುರುಪುತ್, ಯೋಗಾಭ್ಯಾಸಿಗಳಾದ ಅಜಿತ್ ಕುಮಾರ್ ಮಯ್ಯೂ ಹಾಗೂ ಅಶೋಕ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
ಇದುವರೆಗೂ 64 ವಿಶ್ವದಾಖಲೆ 9ರಾಷ್ಟ್ರೀಯ ದಾಖಲೆ ಮಾಡಿರುವುದಾಗಿ ತಿಳಿಸಿದರು.
300ನೌಕಾಸನಗಳನ್ನು 45 ನಿಮಿಷದಲ್ಲಿ ಮಾಡುವ ಗುರಿ ಹೊಂದಿದ್ದ ನಾನು 300ನೌಕಾಸನಗಳನ್ನು ಕೇವಲ 28ನಿಮಿಷ 30 ಸೆಕೆಂಡ್ಗಳಲ್ಲಿ ಪೂರೈಸಿ ಅದಮ್ಯ ಚೈತನ್ಯೋತ್ಸಾಹದಿಂದ ಒಂದು ಗಂಟೆಯಲ್ಲಿ 652 ನೌಕಾಸನ ಮಾಡುವ ಮೂಲಕ ದಾಖಲೆ ಮಾಡಿದ್ದೇನೆ ಎಂದು ತಿಳಿಸಿದರು.