ವಿಶ್ವಯುದ್ದಕ್ಕೂ ಮುನ್ನ ಟೀಂಇಂಡಿಯಾಗೆ ಬಿಗ್ ಶಾಕ್ : ವಿಶ್ವಕಪ್ಗೆ ಆಯ್ಕೆಯಾದ್ರು ತಪ್ಪಲ್ಲಿಲ್ಲ ಸಂಕಷ್ಟ

ಇಡೀ ಕ್ರಿಕೆಟ್ ಜಗತ್ತೆ ಕಾತರದಿಂದ ಕಾದು ಕುಳಿತಿರುವ ವಿಶ್ವಕಪ್ಗೆ 41 ದಿನಗಳು ಬಾಕಿ ಇವೆ. ಆಂಗ್ಲರ ನಾಡಲ್ಲಿ ನಡೆಯಲಿರುವ ವಿಶ್ವ ಯುದ್ದದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಎತ್ತಿ ಹಿಡಿಯುವ ಫೇವರಿಟ್ ತಂಡಗಳ ಪೈಕಿ ಒಂದಾಗಿದೆ. ಆಂಗ್ಲರ ನಾಡಲ್ಲಿ ನಡೆಯುವ ವಿಶ್ವಕಪ್ ಮಹಾ ಜಾತ್ರಯನ್ನ ಕಣ್ತುಂಬಿಕೊಳ್ಳಲು ಟೀಂ ಇಂಡಿಯಾ ಅಭಿಮಾನಿಗಳು ಕೂಡ ಕಾತರದಿಂದ ಕಾದಿದ್ದಾರೆ.

ವಿಶ್ವಯುದ್ದಕ್ಕೆ ಸಜ್ಜಾಗಿರುವ ಟೀಂ ಇಂಡಿಯಾಗೆ ಬಿಗ್ ಶಾಕ್
ಆಂಗ್ಲರ ನಾಡಲ್ಲಿ ನಡೆಯಲಿರುವ ಮಹಾ ವಿಶ್ವ ಯುದ್ದಕ್ಕೆ ಮೊನ್ನೆಯಷ್ಟೆ ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ 15 ಆಟಗಾರರನ್ನೊಳಗೊಂಡ ಬಲಿಷ್ಠ ಟೀಂ ಇಂಡಿಯಾವನ್ನ ಪ್ರಕಟಿಸಿತ್ತು. ವಿಶ್ವಕಪ್ಗೆ ಟೀಂ ಇಂಡಿಯಾ ಆಯ್ಕೆ ಕುರಿತು ಕ್ಯಾಪ್ಟನ್ ಕೊಹ್ಲಿ ಫುಲ್ ಖುಷಿಯಲ್ಲಿದ್ದಾರೆ. ಈ ಖುಷಿಯಲ್ಲಿ ತೇಲಾಡುತ್ತಿರುವಾಗಲೇ ಕ್ಯಾಪ್ಟನ್ ಕೊಹ್ಲಿಗೆ ಬಿಗ್ ಶಾಕ್ ಒಂದು ಕಾದಿದೆ. ಈ ಶಾಕ್ ಕ್ಯಾಪ್ಟನ್ ಕೊಹ್ಲಿಯನ್ನ ಚಿಂತೆಗೀಡು ಮಾಡಿದೆ. ಹಾಗಾದ್ರೆ ಆ ಬಿಗ್ ಶಾಕ್ ಏನು ಅನ್ನೋದನ್ನ ನಾವು ತೋರಿಸ್ತೀವಿ ನೋಡಿ.

ಕನ್ನಡಿಗ ರಾಹುಲ್, ಹಾರ್ದಿಕ್ ವಿಶ್ವಕಪ್ ಆಡೋದು ಡೌಟ್
ಹೌದು, ವಿಶ್ವ ಯುದ್ದಕ್ಕೆ ಆಯ್ಕೆಯಾಗಿರುವ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಿಶ್ವಕಪ್ಗೆ ಆಡೋದು ಅನುಮಾನದಿಂದ ಕೂಡಿದೆ. ಕೆಲವು ತಿಂಗಳ ಹಿಂದೆ ಕಾಫಿ ವಿತ್ ಕರಣ್ ಟಾಕ್ ಶೋ ಕಾಯರ್ಕ್ರಮದಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್.ರಾಹುಲ್ ಭಾರೀ ವಿವಾದ ಎಬ್ಬಿಸಿದ್ರು. ಟಾಕ್ ಶೋನಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಕಾಮುಕತೆ ಕಕ್ಕಿದ್ದ ಈ ಇಬ್ಬರು ಆಟಗಾರರ ವಿರುದ್ಧ ದೇಶವ್ಯಾಪಿ ಖಂಡನೆ ವ್ಯಕ್ತವಾಗಿದ್ದವು. ಈ ಇಬ್ಬರು ಆಟಗಾರರಿಗೆ ತಕ್ಕ ಶಕ್ಷೆ ನೀಡಲೇ ಬೇಕೆಂದು ಕ್ರಿಕೆಟ್ ಅಭಿಮಾನಿಗಳು ತಮ್ಮ ಆಕ್ರೋಶವನ್ನ ಹೊರ ಹಾಕಿದ್ರು.

ಇದರ ಪರಿಣಾಮವೇ ಬಿಸಿಸಿಐ ರಾಹುಲ್ ಮತ್ತು ಪಾಂಡ್ಯಗೆ ಅಮಾನತು ಶಿಕ್ಷೆ ನೀಡಿ ಪ್ರಕರಣದ ತನಿಖೆಗೆ ಆದೇಶಿಸಿತ್ತು. ಸುಪ್ರೀಂ ಕೋರ್ಟ್ ನೇಮಿತ Cricket Of Administration ( CoA )ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡು ನಿವೃತ್ತ ನ್ಯಾಯಾಧೀಶರ ಪ್ರಕರಣವನ್ನ ಒಪ್ಪಿಸಿತ್ತು. ಇದರ ಮಧ್ಯ ಬಿಸಿಸಿಐ ರಾಹುಲ್ ಮತ್ತು ಹಾರ್ದಿಕ್ ಮೇಲಿದ್ದ ಅಮಾನತು ಶಿಕ್ಷೆಯನ್ನ ಹಿಂಪಡೆದಿತ್ತು.

ಸಂಕಷ್ಟದಲ್ಲಿ ಸಿಲುಕಿದ ರಾಹುಲ್, ಹಾರ್ದಿಕ್ ಪಾಂಡ್ಯ
ವಿಶ್ವಕಪ್ ತಂಡಕ್ಕೂ ಆಯ್ಕೆಯಾಗಿರೋ ಪಾಂಡ್ಯ ಮತ್ತು ರಾಹುಲ್ ಫುಲ್ ಖುಷಿಯಲ್ಲಿರುವಾಗಲೇ ಸಂಕಷ್ಟ ಸಿಲುಕಿದ್ದಾರೆ. ಈ ಇಬ್ಬರು ಆಟಗಾರರು ವಿಶ್ವಕಪ್ನಲ್ಲಿ ಆಡೋದು ಅನುಮಾನದಿಂದ ಕೂಡಿದೆ. ಕಾಫಿ ವಿತ್ ಕರಣ್ ಕಾರ್ಯಕ್ರಮ ರಾಹುಲ್, ಹಾರ್ದಿಕ್ ಪಾಂಡ್ಯ ಸಂಕಷ್ಟ್ಕಕೆ ದೂಡಿದೆ. ಟಾಕ್ ಶೋ ಕಾರ್ಯಕ್ರ ಸಂಬಂಧ ರಾಹುಲ್ ಮತ್ತು ಹಾರ್ದಿಕ್ ಇತ್ತಿಚೆಗೆ ಸುಪ್ರೀಂ ಕೋರ್ಟ್ ನೇಮಿತ ಜಸ್ಟಿಸ್ ಡಿ.ಕೆ.ಜೈನ್ ಎದುರು ವಿಚಾರಣೆಗೆ ಹಾಜರಾಗಿದ್ರು. ಇಬ್ಬರ ಹೇಳಿಕೆಗಳನ್ನ ದಾಖಲಿಸಿಕೊಂಡ ಜಸ್ಟಿಸ್ ಜೈನ್, ಇದುವರೆಗೂ ಯಾವುದೇ ವರದಿಯನ್ನ ಸಿಓಎಗೆ ಸಲ್ಲಿಸಿಲ್ಲ.

ಜಸ್ಟಿಸ್ ಜೈನ್ ಕೈಯಲ್ಲಿ ಹಾರ್ದಿಕ್ ಪಾಂಡ್ಯ ಭವಿಷ್ಯ
ಈಗಾಗಲೇ ವಿಶ್ವಕಪ್ ತಂಡಕ್ಕೆ ಆಟಗಾರರನ್ನ ಪ್ರಕಟಿಸಲಾಗಿದ್ದು, ಪಾಂಡ್ಯ ಮತ್ತು ರಾಹುಲ್ ಭವಿಷ್ಯ, ಜಸ್ಟಿಸ್ ಜೈನ್ ವರದಿ ಬಂದ ನಂತರ ಗೊತ್ತಾಗಲಿದೆ. ಒಂದು ವೇಳೆ ಪಾಂಡ್ಯ-ರಾಹುಲ್ ಹಣ ಪಡೆದು ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ರಾ ಅಥವಾ ತಮ್ಮ ಸ್ವಂತ ಇಚ್ಫೆಯಿಂದ ಹೇಳಿಕೆ ನೀಡಿದ್ರಾ ಅನ್ನೋದು ತಿಳಿಯಬೇಕಿದೆ.

ಮತ್ತೊಂದೆಡೆ ಒಂದು ವೇಳೆ ಪಾಂಡ್ಯ-ರಾಹುಲ್ ಮೇಲೆ ಮತ್ತೊಮ್ಮೆ ನಿಷೇಧ ಹೇರಿದ್ದೇ ಆದ್ರೆ, ವಿಶ್ವಕಪ್ಗೆ ಸ್ಟ್ಯಾಂಡ್ ಇನ್ ಪ್ಲೇಯರ್ಗಳನ್ನ ಕಳುಹಿಸಬೇಕಾಗುತ್ತದೆ.

ಮೇ 23ರವರೆಗೂ ವಿಶ್ವಕಪ್ ತಂಡದಲ್ಲಿ ಬದಲಾವಣೆಗೆ ಅವಕಾಶ ಇರೋದ್ರಿಂದ, ಬಿಸಿಸಿಐಗೆ ಆಟಗಾರರ ಆಯ್ಕೆಯಲ್ಲಿ ಯಾವುದೇ ಗೊಂದಲ ಇರೋದಿಲ್ಲ. ಆದ್ರೆ ಅಷ್ಟರೊಳಗೆ ರಾಹುಲ್-ಪಾಂಡ್ಯ ಭವಿಷ್ಯವನ್ನ ಜಸ್ಟಿಸ್ ಡಿ.ಕೆ.ಜೈನ್ ನಿರ್ಧರಿಸಬೇಕಿದೆ.

ಐಪಿಎಲ್ನಲ್ಲಿ ರಾಹುಲ್, ಹಾರ್ದಿಕ್ ಬೊಂಬಾಟ್ ಪರ್ಫಾಮನ್ಸ್
ಸದ್ಯ ಐಪಿಎಲ್ ಆಡುತ್ತಿರುವ ಕೆ.ಎಲ್. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಬೊಂಬಾಟ್ ಪರ್ಫಾಮನ್ಸ್ ಕೊಡುತ್ತಿದ್ದಾರೆ. ಪಂಜಾಬ್ ಒಪನರ್ರಾಗಿ ಆಡುತ್ತಿರುವ ರಾಹುಲ್ ಒಂದು ಶತಕ, ನಾಲ್ಕು ಅರ್ಧ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇನ್ನು ಮುಂಬೈ ಪರ ಆಡುತ್ತಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 9 ಪಂದ್ಯಗಳಿಂದ 218 ರನ್ ಗಳಿಸಿ 8 ವಿಕೆಟ್ ಪಡೆದು ಮಿಂಚಿದ್ದಾರೆ. ಇವರಿಬ್ಬರ ಪರ್ಫಾಮನ್ಸ್ ಕಂಡು ಸ್ವತಃ ವಿರಾಟ್ ಕೊಹ್ಲಿ ಫುಲ್ ಖುಷಿಪಟ್ಟಿದ್ರು.

ಒಟ್ನಲ್ಲಿ ಸಂಕಷ್ಟ ಎದುರಿಸುತ್ತಿರುವ ಕೆ.ಎಲ್. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಸಂಕಷ್ಟದಿಂದ ಪಾರಾಗಿ ವಿಶ್ವಕಪ್ನಲ್ಲಿ ಆಡಲಿ ಅನ್ನೋದೇ ಕೋಟಿ ಕೋಟಿ ಅಭಿಮಾನಿಗಳ ಆಶಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ