ಟ್ರೆಂಡ್ ಆಯ್ತು ಉಪ್ಪಿ ಮತದಾನದ ಫೋಟೋ; ಉಪೇಂದ್ರ ಮಾಡಿದ್ದಾದರೂ ಏನು?

ಬೆಂಗಳೂರು: ಅಭಿಮಾನಿಗಳು ತಮ್ಮ ನೆಚ್ಚಿನ ನಟರು ಏನೇ ಮಾಡಿದರೂ ಫಾಲೋ ಮಾಡುತ್ತಾರೆ. ಹೀಗಾಗಿ ನಟರು ಮಾಡುವ ಹೇರ್ ಸ್ಟೈಲ್, ಡ್ರೆಸ್, ಹೀಗೆ ನಾನಾ ರೀತಿಯ ವಿಚಾರಗಳು ಕೂಡ ಟ್ರೆಂಡ್ ಆಗುತ್ತವೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರು ಮಾಡಿರುವ ಫೋಟೋವೊಂದು ಟ್ರೆಂಡ್ ಆಗಿದೆ.

ಗುರುವಾರ 14 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ನಡೆದಿದೆ. ನಟ-ನಟಿಯರು ತಮ್ಮ ತಮ್ಮ ಕ್ಷೇತ್ರದ ಮತಗಟ್ಟೆಗೆ ಹೋಗಿ ಮತಚಲಾಯಿಸಿದ್ದಾರೆ. ಬಳಿಕ ತಾವೂ ಮತಚಲಾಯಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದೇ ರೀತಿ ಉಪೇಂದ್ರ ಅವರು ತಾವು ಮತದಾನ ಮಾಡಿದ ಫೋಟೋವನ್ನು ಟ್ವೀಟ್‍ನಲ್ಲಿ ಹಂಚಿಕೊಂಡಿದ್ದಾರೆ.

ಉಪೇಂದ್ರ ಅವರು ಕಣ್ಣಿನ ಸುತ್ತ ಕೈ ಇಟ್ಟು ಸೂಪರ್ ಎಂದು ಕೈ ನಲ್ಲಿ ತೋರಿಸಿದ್ದರು. ಅವರು ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಅದೇ ರೀತಿಯ ಸ್ಟೈಲಿನಲ್ಲಿ ತಾವು ಮತದಾನ ಮಾಡಿರುವ ಫೋಟೋವನ್ನು ತೆಗೆದುಕೊಂಡು ಉಪೇಂದ್ರ ಅವರಿಗೆ ರೀಟ್ವೀಟ್ ಮಾಡಿದ್ದಾರೆ. ಈ ಮೂಲಕ ಉಪೇಂದ್ರ ಅವರ ಮತದಾನದ ಫೋಟೋ ಟ್ರೆಂಡ್ ಆಗಿದೆ.

ಈ ಬಾರಿಯ ಚುನಾವಣೆಯಲ್ಲಿ ನಟ ಉಪೇಂದ್ರ ಅವರ ‘ಯುಪಿಪಿ’ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಇದು ಯುಪಿಪಿ ಪಕ್ಷದ ಮೊದಲ ಚುನಾವಣೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ